ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದಲ್ಲಿ ಮಾದಕ ವಸ್ತು ಅಕ್ರಮ ಸಾಗಣೆ 5 ವರ್ಷಗಳಲ್ಲಿ ಗಣನೀಯ ಏರಿಕೆ: ವಿಶ್ವಸಂಸ್ಥೆ

Last Updated 10 ಮಾರ್ಚ್ 2023, 13:52 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ: ಭಾರತದಲ್ಲಿ ಕಳೆದ ಐದು ವರ್ಷಗಳಲ್ಲಿ ಜಪ್ತಿ ಮಾಡಲಾದ ಮಾದಕವಸ್ತುಗಳ ಪ್ರಮಾಣದಲ್ಲಿ ಗಣನೀಯ ಏರಿಕೆಯಾಗಿದೆ. ಅಕ್ರಮವಾಗಿ ಡಾರ್ಕ್‌ನೆಟ್‌ ಮತ್ತು ಕಡಲುಮಾರ್ಗದಲ್ಲಿ ಸಾಗಣೆಯಾಗುತ್ತಿದೆ ಎಂದು ವಿಶ್ವಸಂಸ್ಥೆಯ ಕಣ್ಗಾವಲು ಸಂಸ್ಥೆ ‘ಅಂತರರಾಷ್ಟ್ರೀಯ ಮಾದಕವಸ್ತು ನಿಯಂತ್ರಣ ಮಂಡಳಿ’(ಐಎನ್‌ಸಿಬಿ) ತಿಳಿಸಿದೆ.

ಗುರುವಾರ ಬಿಡುಗಡೆ ಮಾಡಿದ 2022ರ ವರದಿಯಲ್ಲಿ ಐಎನ್‌ಸಿಪಿ ಈ ಮಾಹಿತಿ ನೀಡಿದೆ. ದೇಶದಲ್ಲಿ 2017ರಲ್ಲಿ 2,146 ಕೆ.ಜಿ ಹೆರಾಯಿನ್ ವಶಕ್ಕೆ ಪಡೆದಿದ್ದರೆ, 2021ರಲ್ಲಿ 7,282 ಕೆ.ಜಿ.ಗೆ ಏರಿತ್ತು. ಓಪಿಯಂ ಕಳ್ಳಸಾಗಣೆಯು ಏರಿದ್ದು, 2017ರಲ್ಲಿ 2,551 ಕೆ.ಜಿ ಮತ್ತು 2021ರಲ್ಲಿ 4,386 ಕೆ.ಜಿ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದೆ.

2021ರ ಸೆಪ್ಟೆಂಬರ್‌ ತಿಂಗಳಲ್ಲಿ ಗುಜರಾತ್‌ನಲ್ಲಿ ವಶಕ್ಕೆ ಪಡೆದಿದ್ದ ಮೂರು ಟನ್‌ ಮಾದಕವಸ್ತುಗಳು ಸೇರಿದಂತೆ ಅಪಾರ ಪ್ರಮಾಣದ ಹೆರಾಯಿನ್ ವಶಕ್ಕೆ ಪಡೆದಿರುವುದಾಗಿ ಬಂದರು ಅಧಿಕಾರಿಗಳು ತಿಳಿಸಿದ್ದಾರೆ.

2021ರಲ್ಲಿ ಭಾರತದಲ್ಲಿ 364 ಕೆ.ಜಿ ಕೊಕೇನ್‌ ವಶಕ್ಕೆ ಪಡೆಯಲಾಗಿದೆ. ಇದಕ್ಕೂ ಮುಂಚಿನ ಮೂರು ವರ್ಷಗಳಲ್ಲಿ ಸರಾಸರಿ 40 ಕೆ.ಜಿ ವಶಕ್ಕೆ ಪಡೆಯಲಾಗಿತ್ತು ಎಂದೂ ವರದಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT