ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಲಂಕಾ: ಸರಕುಸಾಗಣೆ ಹಡಗು ಮುಳುಗಿ, ತೈಲ ಸೋರಿಕೆ ಭೀತಿ

Last Updated 27 ಮೇ 2021, 16:28 IST
ಅಕ್ಷರ ಗಾತ್ರ

ಕೊಲಂಬೊ: ಸಿಂಗಪುರದ ಸರಕುಸಾಗಣೆ ಹಡಗು ಶ್ರೀಲಂಕಾದ ಕೊಲಂಬೊ ಬಳಿ ಮುಳುಗಿದ್ದು, ತೈಲ ಸೋರಿಕೆಯಾಗುವ ಭೀತಿ ಎದುರಾಗಿದೆ ಎಂದು ವರದಿಯಾಗಿದೆ. ಇದೇಹಡಗಿನಲ್ಲಿ ಕಳೆದ ವಾರ ಅಗ್ನಿ ಅನಾಹುತ ಸಂಭವಿಸಿತ್ತು.

ಬೆಂಕಿ ನಂದಿಸುವ ಯತ್ನಗಳುಫಲಪ್ರದವಾಗದ ಕಾರಣ ತೈಲ ಸೋರಿಕೆ ಅನಾಹುತ ಎದುರಿಸಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ‘ಎಂವಿ ಎಕ್ಸ್‌ ಪ್ರೆಸ್ ಪರ್ಲ್’ ಹಡಗು ಮುಳುಗುವ ಭೀತಿ ಎದುರಾಗಿದೆ ಎಂದು ‘ಕೊಲಂಬೊ ಗ್ಯಾಜೆಟ್’ ಪತ್ರಿಕೆ ವರದಿ ಮಾಡಿದೆ.

ಈ ಹಡಗಿನಲ್ಲಿ 325 ಮೆಟ್ರಿಕ್ ಟನ್ ಇಂಧನ ಟ್ಯಾಂಕ್‌ಗಳು ಮತ್ತು ನೈಟ್ರಿಕ್ ಆ್ಯಸಿಡ್‌ನ 1,486 ಕಂಟೇನರ್‌ಗಳಿವೆ ಎನ್ನಲಾಗಿದೆ.

ತೈಲ ಸೋರಿಕೆಯಾದಲ್ಲಿ ಅದು ಸೂಕ್ಷ್ಮ ಪ್ರದೇಶ ಮತ್ತು ಪ್ರಮುಖ ಪ್ರವಾಸಿ ತಾಣವಾದ ನೆಗೊಂಬೊ ಲಗೂನ್‌ನತ್ತ ಪ್ರವಹಿಸಲಿದೆ ಎಂದು ಸಾಗರ ಪರಿಸರ ಸಂರಕ್ಷಣಾ ಪ್ರಾಧಿಕಾರ ಎಚ್ಚರಿಕೆ ನೀಡಿದೆ.

ಹಡಗಿನ ಅವಶೇಷ ಮತ್ತು ಇತರ ವಸ್ತುಗಳು ಕಾಣಿಸಿದಲ್ಲಿ ಅವುಗಳಿಂದ ದೂರ ಇರುವಂತೆ ತೀರ ಪ್ರದೇಶದ ಜನರಿಗೆ ಈಗಾಗಲೇ ಪ್ರಾಧಿಕಾರ ಎಚ್ಚರಿಕೆ ನೀಡಿದೆ.

ಅಪಘಾತಕ್ಕೀಡಾಗಿರುವ ಹಡಗು ಗುಜರಾತಿನ ಹಾಜಿರಾಯಾದಿಂದ ಕೊಲಂಬೊ ಬಂದರಿಗೆ ತೈಲ ಮತ್ತು ರಾಸಾಯನಿಕಗಳನ್ನು ಸಾಗಿಸುತ್ತಿತ್ತು. ಕೊಲಂಬೊ ಕರಾವಳಿಯಿಂದ 9.5 ನಾಟಿಕಲ್ ಮೈಲಿ ದೂರದಲ್ಲಿ ಮೇ 20ರಂದು ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT