ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಲಂಕಾ: ಮಧ್ಯಂತರ ಸರ್ಕಾರದ ನೇತೃತ್ವ ವಹಿಸಲು ವಿಪಕ್ಷ ಎಸ್‌ಜೆಬಿ ನಕಾರ

Last Updated 8 ಮೇ 2022, 10:48 IST
ಅಕ್ಷರ ಗಾತ್ರ

ಕೊಲಂಬೊ: ಶ್ರೀಲಂಕಾದದಲ್ಲಿ ಆರ್ಥಿಕ ಬಿಕ್ಕಟ್ಟಿನಿಂದ ರಾಜಕೀಯ ಅಸ್ಥಿರತೆ ಮುಂದುವರಿದಿರುವ ನಡುವೆಯೇ, ಮಧ್ಯಂತರ ಸರ್ಕಾರದ ನೇತೃತ್ವವನ್ನು ಪ್ರತಿಪಕ್ಷ ನಾಯಕ ಸಜಿತ್ ಪ್ರೇಮದಾಸ ಅವರು ವಹಿಸಿಕೊಳ್ಳಬೇಕೆಂಬ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರ ಕೋರಿಕೆಯನ್ನು ತಿರಸ್ಕರಿಸಿದ್ದಾಗಿ ದೇಶದ ಪ್ರಮುಖ ಪ್ರತಿಪಕ್ಷ ಎಸ್‌ಜೆಬಿ ಹೇಳಿದೆ.

ಈ ಸಂಬಂಧ ಭಾನುವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಎಸ್‌ಜೆಬಿಯ ರಾಷ್ಟ್ರೀಯ ಸಂಘಟಕ ಟಿಸ್ಸಾ ಅಟ್ಟನಾಯಕೆ ಅವರು, 'ಮಧ್ಯಂತರ ಸರ್ಕಾರದ ನೇತೃತ್ವ ವಹಿಸಬೇಕೆಂಬ ಲಂಕಾ ಅಧ್ಯಕ್ಷರ ಕೋರಿಕೆಯನ್ನು ನಮ್ಮ ನಾಯಕ ತಿರಸ್ಕರಿಸಿದ್ದಾರೆ' ಎಂದು ಹೇಳಿದ್ದಾರೆ.

ಎಸ್‌ಜೆಬಿ ರಾಷ್ಟ್ರಾಧ್ಯಕ್ಷರ ವ್ಯವಸ್ಥೆಯ ಆಡಳಿತವನ್ನು ಕೊನೆಗೊಳಿಸುವ ನಿರ್ಧಾರದೊಂದಿಗೆ ಮುಂದಿನ 18 ತಿಂಗಳ ಕಾಲ ಮಧ್ಯಂತರ ಸರ್ಕಾರ ರಚನೆಯಾಗಬೇಕೆಂಬ ವಕೀಲರ ಸಂಘಟನೆ ಬಿಎಎಸ್ಎಲ್ ಪ್ರಸ್ತಾವನೆಯನ್ನು ಬೆಂಬಲಿಸುವುದಾಗಿ ಎಸ್‌ಜೆಬಿ ಶನಿವಾರ ಘೋಷಣೆ ಮಾಡಿತ್ತು. ಅಲ್ಲದೆ ರಾಜಪಕ್ಸ ಅವರಿಗೆ ಅನಿರ್ಬಂಧಿತ ಅಧಿಕಾರ ನೀಡುವ ಸಾಂವಿಧಾನಿಕ 20ನೇ ತಿದ್ದುಪಡಿಯನ್ನು ಹಿಂಪಡೆಯಬೇಕು ಎಂದೂ ಎಸ್‌ಜೆಬಿ ಒತ್ತಾಯಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT