ಕೊಲಂಬೊ: ಶ್ರೀಲಂಕಾದ ಚುನಾವಣಾ ಆಯೋಗವು ಭಾನುವಾರ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆಗೆ ಅವರಿಗೆ ಪತ್ರ ಬರೆದಿದ್ದು, ಈಗಾಗಲೇ ವಿಳಂಬವಾಗಿರುವ ಸ್ಥಳೀಯ ಕೌನ್ಸಿಲ್ ಚುನಾವಣೆಗಳನ್ನು ನಡೆಸಲು ಅಗತ್ಯ ಹಣ ಬಿಡುಗಡೆ ಮಾಡುವಂತೆ ವಿನಂತಿಸಿದೆ.

ಪತ್ರ ಬರೆದ ವಿಚಾರವನ್ನು ಚುನಾವಣಾ ಆಯೋಗದ ಅಧ್ಯಕ್ಷ ನಿಮಲ್ ಜಿ ಪುಟ್ಟಿಹೇವಾ ಬಹಿರಂಗಪಡಿಸಿದ್ದಾರೆ.

ಈ ಹಿಂದೆ ಮಾರ್ಚ್ 9 ರಂದು ನಿಗದಿಯಾಗಿದ್ದ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ದೇಶದ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಹಲವು ಕಾರಣಗಳನ್ನು ಮುಂದೊಡ್ಡಿ ಏಪ್ರಿಲ್ 25 ಕ್ಕೆ ಮುಂದೂಡಲಾಗಿದೆ.

ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಹಣಕಾಸು ಸಚಿವಾಲಯದಿಂದ ಹಣ ಬಿಡುಗಡೆ ಮಾಡಿಲ್ಲ ಎಂದು ಖಜಾನೆ ಅಧಿಕಾರಿಗಳು ಕಳೆದ ತಿಂಗಳು ಚುನಾವಣಾ ಆಯೋಗಕ್ಕೆ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಪತ್ರ ಬರೆದು ಅನುದಾನ ಕೋರಲಾಗಿದೆ.

ಈ ತಿಂಗಳ ಆರಂಭದಲ್ಲಿ, ಖಜಾನೆ ಕಾರ್ಯದರ್ಶಿ ಮತ್ತು ಪೋಲೀಸ್ ಮುಖ್ಯಸ್ಥರಿಗೆ ಲಿಖಿತ ಮನವಿ ಮಾಡಿದ್ದ ಸರ್ಕಾರದ ಮುದ್ರಕರಾದ ಗಂಗಣಿ ಲಿಯಾನ, ಈಗಾಗಲೇ ವಿಳಂಬವಾಗಿರುವ ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ನಡೆಸುವಂತೆ ಮಾಡಿದ್ದರು.

ಅಂಚೆ ಮತದಾನಕ್ಕೆ ಮತಪತ್ರಗಳನ್ನು ಮುದ್ರಿಸಲು ಸಾಧ್ಯವಾಗದಿರುವುದರಿಂದ ಚುನಾವಣಾ ಆಯೋಗವು ಚುನಾವಣೆಯನ್ನು ಮುಂದೂಡುವಂತೆ ಆಗಿದೆ ಎಂದು ಲಿಯಾನ ಅವರ ಕಚೇರಿ ತಿಳಿಸಿತ್ತು.

ಚುನಾವಣೆ ನಡೆಸಲು ಅಡ್ಡಿಯಾಗಬಾರದು ಎಂದು ಶ್ರೀಲಂಕಾದ ಸುಪ್ರೀಂ ಕೋರ್ಟ್ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ನ್ಯಾಯಾಲಯದ ಆದೇಶದ ಮೇರೆಗೆ ಚುನಾವಣಾ ದಿನಾಂಕವನ್ನು ಏಪ್ರಿಲ್ 25ಕ್ಕೆ ನಿಗದಿಪಡಿಸಲಾಗಿದ್ದು, ಮಾರ್ಚ್ 18 ರಿಂದ 21 ರ ನಡುವೆ ಅಂಚೆ ಮತದಾನ ನಡೆಯಲಿದೆ.

ಪ್ರಸ್ತುತ ಪರಿಹಾರ ಪ್ಯಾಕೇಜ್ಗಾಗಿ ಐಎಂಎಫ್ನೊಂದಿಗೆ ಅಧ್ಯಕ್ಷ ವಿಕ್ರಮಸಿಂಘೆ ಮಾತುಕತೆ ನಡೆಸುತ್ತಿದ್ದಾರೆ. ದೇಶದ ಆರ್ಥಿಕ ವ್ಯವಸ್ಥೆ ಸದ್ಯ ಸರಿ ಇಲ್ಲದ ಹಿನ್ನೆಲೆಯಲ್ಲಿ ಚುನಾವಣೆ ಮೇಲೆ ವಿಕ್ರಮಸಿಂಘೆ ನಿರಾಸಕ್ತಿ ತೋರಿದ್ದಾರೆ.

ಇವುಗಳನ್ನೂ ಓದಿ

ಶ್ರೀಲಂಕಾ: ಪಠ್ಯಪುಸ್ತಕ ಮುದ್ರಣಕ್ಕೆ ಭಾರತದ ನೆರವು

ಶ್ರೀಲಂಕಾ ಸ್ಥಳೀಯ ಸಂಸ್ಥೆಗಳಿಗೆ ಮುಂದಿನ ವಾರ ಚುನಾವಣಾ ದಿನಾಂಕ ಘೋಷಣೆ

ಮರುಸಾಲ ಕೊಡಲು ಚೀನಾ ಒಪ್ಪಿದೆ: ಶ್ರೀಲಂಕಾ ಅಧ್ಯಕ್ಷ

₹3,300 ಕೋಟಿಯ 2 ಪವನ ವಿದ್ಯುತ್ ಯೋಜನೆಗಳನ್ನು ‘ಅದಾನಿ’ಗೆ ನೀಡಿದ ಶ್ರೀಲಂಕಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.