ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಲಂಕಾ ಸ್ಫೋಟಕ್ಕೆ 6 ಮಂದಿ ಕನ್ನಡಿಗರು ಬಲಿ

ರಾಯಭಾರ ಕಚೇರಿಯಿಂದ ಅಧಿಕೃತವಾಗಿ ಮೂವರ ಹೆಸರು ಮಾತ್ರ ಪ್ರಕಟ
Last Updated 22 ಏಪ್ರಿಲ್ 2019, 15:45 IST
ಅಕ್ಷರ ಗಾತ್ರ

ಬೆಂಗಳೂರು: ಶ್ರೀಲಂಕಾ ಸರಣಿ ಸ್ಫೋಟಕ್ಕೆ ರಾಜ್ಯದಿಂದ ಪ್ರವಾಸಕ್ಕೆ ತೆರಳಿದವರಲ್ಲಿಆರುಮಂದಿ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬೆಂಗಳೂರಿನ 8ನೇ ಮೈಲಿ ಬಳಿಯ ಎಂ.ಎಸ್.ರಾಮಯ್ಯ ಬಡಾವಣೆ ನಿವಾಸಿದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಘಟಕದ ಕಾರ್ಯಾಧ್ಯಕ್ಷ ಹನುಮಂತರಾಯಪ್ಪ, ನೆಲಮಂಗಲ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಎಂ. ಲಕ್ಷ್ಮಿನಾರಾಯಣ,ದಾಸರಹಳ್ಳಿ ಬೂತ್ ಸಮಿತಿ ಅಧ್ಯಕ್ಷಚೊಕ್ಕಸಂದ್ರ ನಿವಾಸಿಎಂ. ರಂಗಪ್ಪ, ತುಮಕೂರಿನ ಲಕ್ಷ್ಮಣ ಗೌಡ ರಮೇಶ್,ನೆಲಮಂಗಲಹರ್ಷ ಆಸ್ಪತ್ರೆ ಪಾಲುದಾರಎಚ್‌.ಶಿವಕುಮಾರ್,ಟೈಲ್ಸ್ ಉದ್ಯಮಿ ಬೆಂಗಳೂರುಎಸ್‌.ಆರ್. ನಾಗರಾಜ್ ರೆಡ್ಡಿ ಮೃತಪಟ್ಟವರು ಎಂದು ಮೂಲಗಳು ತಿಳಿಸಿವೆ. ಮಾರೇಗೌಡಅಡಕಮಾರನಹಳ್ಳಿ,ಪುಟ್ಟರಾಜುಅರೇಕ್ಯಾತನಹಳ್ಳಿ ಕಾಣೆಯಾಗಿದ್ದಾರೆ.

ಈ ಸಂಬಂಧ ಶ್ರೀಲಂಕಾ ರಾಯಭಾರ ಕಚೇರಿಯಿಂದ ಹನುಮಯ್ಯ ಶಿವಕುಮಾರ ಎಂಬುವರು ಮೃತಪಟ್ಟಿದ್ದಾರೆ ಎಂದು ತಿಳಿಸಲಾಗಿದೆ. ಇದರಿಂದಾಗಿ ಶ್ರೀಲಂಕಾ ರಾಯಭಾರ ಕಚೇರಿಯು ರಾಜ್ಯದಮೂವರು ಮೃತಪಟ್ಟಿರುವುದು ಅಧಿಕೃತವಾಗಿ ಪ್ರಕಟವಾಗಿದೆ.ಆದರೆ, ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯದಿಂದ ರಾಜ್ಯ ಪೊಲೀಸ್ ಇಲಾಖೆಗೆ ಮಾಹಿತಿ ನೀಡುವವರೆಗೆ ತಾವು ಯಾರ ಹೆಸರನ್ನೂ ಹೇಳುವಂತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಆದರೂ ಸಂಬಂಧಿಕರು ಶ್ರೀಲಂಕಾಗೆ ತೆರಳಿದ್ದು ಶವಗಳನ್ನು ನಗರಕ್ಕೆ ತರಲು ಪ್ರಯತ್ನಿಸಲಾಗುತ್ತಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT