ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೆ .14ರಂದು ಯುಎಇನಲ್ಲಿ ಹಿಂದೂ ದೇವಾಲಯ ಉದ್ಘಾಟನೆ

ಪ್ರಧಾನಿಯಿಂದ ಉದ್ಘಾಟನೆ–ಮಕ್ಕಳಿಂದ ‘ಕಲ್ಲಿನ ಸೇವೆ’– ಯುಎಇಯಲ್ಲಿ ಕಲ್ಲಿನಿಂದ ನಿರ್ಮಿಸಲಾಗಿರುವ ಮೊದಲ ಹಿಂದೂ ದೇವಾಲಯ
Published 12 ಫೆಬ್ರುವರಿ 2024, 15:19 IST
Last Updated 12 ಫೆಬ್ರುವರಿ 2024, 15:19 IST
ಅಕ್ಷರ ಗಾತ್ರ

ಅಬುಧಾಬಿ: ಅರಬ್‌ ಸಂಯುಕ್ತ ಸಂಸ್ಥಾನದಲ್ಲಿ (ಯುಎಇ) ‘ಬೋಚಾಸನವಾಸಿ ಶ್ರೀ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥಾ ’(ಬಿಎಪಿಎಸ್‌) ಹಿಂದೂ ದೇವಾಲಯವನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರುವರಿ 14ರಂದು ಉದ್ಘಾಟಿಸಲಿದ್ದಾರೆ. ಯುಎಇಯಲ್ಲಿ ಕಲ್ಲಿನಿಂದ ನಿರ್ಮಿಸಲಾಗಿರುವ ಮೊದಲ ಹಿಂದೂ ದೇವಾಲಯವಿದು. 

ಪ್ರಧಾನಿ ಮೋದಿ ಅವರು ಎರಡು ದಿನಗಳ ಯುಎಇ ಪ್ರವಾಸ ಇದಾಗಿದೆ. 

ಕಲ್ಲಿನ ಸೇವೆ:

‘ದೇವಸ್ಥಾನ ಆವರಣದಲ್ಲಿ ಭಾರತ ಮೂಲದ ಮಕ್ಕಳು ಮೂರು ತಿಂಗಳಿಂದ ಪ್ರತಿ ವಾರಾಂತ್ಯ ‘ಕಲ್ಲಿನ ಸೇವೆ’ ಸಲ್ಲಿಸುತ್ತಿದ್ದಾರೆ. ಉದ್ಘಾಟನಾ ಸಮಾರಂಭಕ್ಕೆ ಹಾಜರಾಗುವ ಅತಿಥಿಗಳಿಗೆ ಉಡುಗೊರೆ ನೀಡುವ ಸಲುವಾಗಿ ಕಲ್ಲುಗಳ ಮೇಲೆ ವರ್ಣಚಿತ್ರ ರಚಿಸುತ್ತಿದ್ದಾರೆ. ಇದಕ್ಕೆ ‘ಟೈನಿ ಟ್ರೆಶರ್ಸ್‌’ ಎಂದು ಹೆಸರಿಡಲಾಗಿದೆ. ಸದ್ಯ ಈ ಕಲಾಕೃತಿಗಳಿಗೆ ಅಂತಿಮ ಸ್ಪರ್ಶ ನೀಡಲಾಗುತ್ತಿದೆ’ ಎಂದು 12 ವರ್ಷ ವಯಸ್ಸಿನ ಬಾಲಕಿ ತಿಥಿ ಪಟೇಲ್‌ ತಿಳಿಸಿದ್ದಾಳೆ.

ಈ ವಾರಾಂತ್ಯದ ಚಟುವಟಿಕೆಯನ್ನು ಆಕೆ ಮತ್ತು ಆಕೆಯ ಸ್ನೇಹಿತರು ಆನಂದಿಸುತ್ತಿರುವುದಾಗಿ ಹೇಳಿದ್ದಾಳೆ.

‘ದೇವಸ್ಥಾನ ನಿರ್ಮಾಣ ಸ್ಥಳದಲ್ಲಿ ದೊರಕುವ ಚಿಕ್ಕ ಕಲ್ಲುಗಳನ್ನು ಆಯ್ದು, ಅವನ್ನು ಸ್ವಚ್ಛಗೊಳಿಸಿ ಪೇಯಿಂಟ್‌ ಮಾಡಲಾಗಿದೆ. ನಂತರ ವಾರ್ನಿಷ್‌ ಬಳಿಯಲಾಗಿದೆ. ಕಲ್ಲಿನ ಒಂದು ಬದಿಯಲ್ಲಿ ಹಿತೋಪದೇಶ ಬರೆದಿದ್ದರೆ, ಮತ್ತೊಂದು ಬದಿಯಲ್ಲಿ ದೇವಸ್ಥಾನದ ಯಾವುದಾದರೂ ಒಂದು ಭಾಗವನ್ನು ಚಿತ್ರಿಸಲಾಗಿದೆ. ಸದ್ಯ ಅವುಗಳನ್ನು ಉಡುಗೊರೆ ಪೊಟ್ಟಣದಲ್ಲಿ ಇರಿಸಲಾಗುತ್ತಿದೆ’ ಎಂದು ಎಂಟು ವರ್ಷ ವಯಸ್ಸಿನ ರೇವಾ ಕಾರಿಯ ತಿಳಿಸಿದ್ದಾಳೆ.

‘ಅಹ್ಲಾನ್‌ ಮೋದಿ’– ವೀಕ್ಷಕರ ಸಂಖ್ಯೆ ಕಡಿತ
ಅಬುದಾಭಿಯ ಝಾಯೆದ್‌ ಸ್ಪೋರ್ಟ್ಸ್‌ ಸಿಟಿಯಲ್ಲಿ ಮಂಗಳವಾರದಂದು ‘ಅಹ್ಲಾನ್‌ ಮೋದಿ’ (ಹೆಲೊ ಮೋದಿ) ಕಾರ್ಯಕ್ರಮ ಆಯೋಜಿಸಲಾಗಿದೆ. ಮೋದಿ ಅವರು ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಆದರೆ, ಇಲ್ಲಿ ಪ್ರತಿಕೂಲ ಹವಾಮಾನ ಉಂಟಾಗಿರುವ ಕಾರಣ ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವ ಜನರ ಸಂಖ್ಯೆಯನ್ನು ಕಡಿತಗೊಳಿಸಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಸುಮಾರು 80 ಸಾವಿರ ಜನರು ಪಾಲ್ಗೊಳ್ಳುವಂತೆ ಕಾರ್ಯಕ್ರಮ ರೂಪಿಸಲಾಗಿತ್ತು. ಆದರೆ ಈಗ ಆ ಸಂಖ್ಯೆಯನ್ನು 35 ಸಾವಿರಕ್ಕೆ ಇಳಿಸಲಾಗಿದೆ ಎಂದು ಅಲ್ಲಿಯ ಭಾರತೀಯ ಸಮುದಾಯ ಮುಖಂಡರೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT