ಕೈರೊ, ಸುಡಾನ್: ಸುಡಾನ್‌ನಲ್ಲಿ ಉಂಟಾಗಿರುವ ಪ್ರಜಾಪ್ರಭುತ್ವ ಪರ ಪ್ರತಿಭಟನೆಗಳು ಮತ್ತು ರಾಜಕೀಯ ಕ್ಷೋಭೆಯಿಂದ ಅಲ್ಲಿಯ ಪ್ರಧಾನಿ ಅಬ್ದುಲ್ಲಾ ಹ್ಯಾಮ್‌ಡೋಕ್ ಭಾನುವಾರ ರಾಜೀನಾಮೆ ಘೋಷಿಸಿದ್ದಾರೆ.

ಅಕ್ಟೋಬರ್‌ನಲ್ಲಿ ದಂಗೆಯ ನಂತರ ಮಿಲಿಟರಿಯೊಂದಿಗಿನ ಒಪ್ಪಂದದ ಭಾಗವಾಗಿವಿಶ್ವಸಂಸ್ಥೆಯ ಮಾಜಿ ಅಧಿಕಾರಿ ಹ್ಯಾಮ್‌ಡೋಕ್ ಅವರನ್ನು ಕಳೆದ ವರ್ಷ ನವೆಂಬರ್‌ನಲ್ಲಿ ಸುಡಾನ್ ಸರ್ಕಾರದ ಪ್ರಧಾನಿಯಾಗಿ ಮರು ನೇಮಕ ಮಾಡಲಾಗಿತ್ತು. ಈ ವೇಳೆ ಹ್ಯಾಮ್‌ಡೋಕ್ ಸಂಪುಟ ರಚಿಸಲು ವಿಫಲವಾಗಿದ್ದರು.

ದೇಶದಲ್ಲಿ ಅಭದ್ರತೆ ಮತ್ತು ಆರ್ಥಿಕ ಸವಾಲುಗಳ ನಡುವೆ ಪ್ರಧಾನಿ ಹ್ಯಾಮ್‌ಡೋಕ್ ರಾಜೀನಾಮೆಯು ರಾಜಕೀಯ ಸ್ಥಿತ್ಯಂತರ ಉಂಟು ಮಾಡಿದೆ.

‘ನಾನು ನನ್ನ ಜವಾಬ್ದಾರಿಯಿಂದ ಹಿಂದೆ ಸರಿಯಲು ನಿರ್ಧರಿಸಿದ್ದು ಪ್ರಧಾನಿ ಹುದ್ದೆಗೆ ರಾಜೀನಾಮೆ ಘೋಷಿಸುತ್ತೇನೆ. ಇದರಿಂದ ಮತ್ತೊಬ್ಬ ವ್ಯಕ್ತಿಯು ಪ್ರಜಾಪ್ರಭುತ್ವ ದೇಶವನ್ನು ಮುನ್ನಡೆಸಲು ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮರುಸ್ಥಾಪಿಸಲು ಸಾಧ್ಯವಾಗುತ್ತದೆ’ ಎಂದು ರಾಷ್ಟ್ರೀಯ ದೂರದರ್ಶನ ವಾಹಿನಿಯ ಭಾಷಣದಲ್ಲಿ ಭಾನುವಾರ ಹೇಳಿದರು.

ದೇಶದಲ್ಲಿ ಮಿಲಿಟರಿ ಸ್ವಾಧೀನದ ನಂತರ ಉಂಟಾಗಿರುವ ರಾಜಕೀಯ ಬಿಕ್ಕಟ್ಟು ಪೂರ್ಣ ಪ್ರಮಾಣದ ಬಿಕ್ಕಟ್ಟಾಗಿ ಪರಿಣಮಿಸಬಹುದು. ಇದರಿಂದ ಈಗಾಗಲೇ ಜರ್ಜರಿತವಾಗಿರುವ ದೇಶದ ಆರ್ಥಿಕತೆಯನ್ನು ಮತ್ತಷ್ಟು ಹಾನಿಗೊಳಿಸಬಹುದು ಎಂದು ಅವರು ಎಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.