ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗ್ದಾದ್‌ನಲ್ಲಿ ಬಾಂಬ್‌ ಸ್ಫೋಟ: 28 ಸಾವು

73 ಮಂದಿಗೆ ಪೆಟ್ಟು, ಇಸ್ಲಾಮಿಕ್ ಸ್ಟೇಟ್ ಕೃತ್ಯ ಶಂಕಿಸಿದ ಇರಾಕ್
Last Updated 21 ಜನವರಿ 2021, 12:13 IST
ಅಕ್ಷರ ಗಾತ್ರ

ಬಾಗ್ದಾದ್‌: ಇರಾಕ್‌ ರಾಜಧಾನಿ ಬಾಗ್ದಾದ್‌ನ ವಾಣಿಜ್ಯ ಕೇಂದ್ರದ ಬಳಿ ಗುರುವಾರ ಎರಡು ಕಡೆ ಬಾಂಬ್‌ ಸ್ಫೋಟ ನಡೆದಿದ್ದು, ಕನಿಷ್ಠ 28 ಮಂದಿ ಮೃತಪಟ್ಟಿದ್ದಾರೆ. ಇತರೆ 73 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೇಂದ್ರ ಬಾಗ್ದಾದ್‌ನಲ್ಲಿಬಾಬ್ ಅಲ್ ಶಾರ್ಗಿ ವಾಣಿಜ್ಯ ಕೇಂದ್ರದ ಬಳಿ ಅವಘಡ ಸಂಭವಿಸಿದೆ. ಕೃತ್ಯ ನಡೆದ ಸ್ಥಳದಲ್ಲಿ ರಕ್ತ ಚೆಲ್ಲಾಡಿದ್ದು, ಗಾಯಾಳುಗಳ ಚಿಂದಿಯಾಗಿದ್ದ ಉಡುಪು ಮತ್ತು ಪಾದರಕ್ಷೆಗಳು ಘಟನೆಯ ಭೀಕರತೆಗೆ ಸಾಕ್ಷಿಯಾಗಿದ್ದವು.

‘ಇದು ಆತ್ಮಾಹುತಿ ದಾಳಿ ಕೃತ್ಯ. ಇದರ ಬಗ್ಗೆ ಕುರಿತು ತಕ್ಷಣಕ್ಕೆ ಯಾವುದೇ ಸಂಘಟನೆ ಹೊಣೆ ಹೊತ್ತುಕೊಂಡಿಲ್ಲ’ ಅಧಿಕಾರಿಗಳನ್ನು ಉಲ್ಲೇಖಿಸಿ ಇರಾಕ್‌ ಟಿ.ವಿ ವರದಿ ಮಾಡಿದೆ.

‘ಆದರೆ, ಇಸ್ಲಾಮಿಕ್ ಸ್ಟೇಟ್‌ ಗುಂಪು ಮತ್ತು ಇತ್ತೀಚಿನ ವರ್ಷಗಳಲ್ಲಿ ತಲೆ ಎತ್ತಿರುವ ಉಗ್ರರ ಸಂಘಟನೆಗಳು ಕೃತ್ಯ ಎಸಗಿರಬಹುದು’ ಎಂದು ಇರಾಕ್ ಆಡಳಿತ ಶಂಕಿಸಿದೆ.

ಇರಾಕ್‌ ಸೇನೆಯ ಪ್ರಕಾರ, ಗಾಯಾಳುಗಳ ಪೈಕಿ ಕೆಲವರ ಸ್ಥಿತಿ ಗಂಭೀರವಾಗಿದೆ. ಮೃತರ ಸಂಖ್ಯೆ ಇನ್ನಷ್ಟು ಹೆಚ್ಚಬಹುದು. ಈ ಮಧ್ಯೆ ಪೊಲೀಸರು ಕೂಡಾ ಸಾವಿನ ಸಂಖ್ಯೆಯ ಇನ್ನೂ ಹೆಚ್ಚಾಗಿರಬಹುದು ಎಂದು ಹೇಳಿದ್ದಾರೆ.

ಗಾಯಾಳುಗಳಿಗೆ ಅಗತ್ಯ ಚಿಕಿತ್ಸೆ ಒದಗಿಸಲು ಕಾರ್ಯತತ್ಪರವಾಗಬೇಕು ಎಂದೂ ಇರಾಕ್ ಆರೋಗ್ಯ ಸಚಿವಾಲಯ ಆಸ್ಪತ್ರೆ ಆಡಳಿತಗಳಿಗೆ ಸೂಚನೆ ನೀಡಿದೆ.

ಸೇನಾ ವಕ್ತಾರ ಯಯ್ಯಾ ರಸೂಲ್ ಅವರು, ತಯರನ್‌ ಸ್ಕ್ವೈರ್ ಬಳಿ ಭದ್ರತಾ ಪಡೆಗಳು ಇಬ್ಬರು ಶಂಕಿತ ಆತ್ಮಹತ್ಯಾ ಉಗ್ರರನ್ನು ಸುತ್ತುವರಿದಾಗ, ಅವತು ತಮ್ಮನ್ನು ಸ್ಫೋಟಿಸಿಕೊಂಡರು ಎಂದು ತಿಳಿಸಿದ್ದಾರೆ.

ಬಾಗ್ದಾದ್‌ ಅನ್ನು ಗುರಿಯಾಗಿಸಿ ಮೂರು ವರ್ಷಗಳ ನಂತರ ಆತ್ಮಹತ್ಯಾ ದಾಳಿ ನಡೆದಿದೆ. 2018ರಲ್ಲಿ ಆಗಿನ ಪ್ರಧಾನಿ ಹೈದರ್ ಅಲ್ ಅಬಾಡಿ ಅವರು ಇಸ್ಲಾಮಿಕ್ ಸ್ಟೇಟ್‌ ಗುಂಪಿನ ವಿರುದ್ಧ ವಿಜಯದ ಘೋಷಣೆ ಮಾಡಿದ್ದ ಹಿಂದೆಯೇ ಕೃತ್ಯ ನಡೆದಿತ್ತು.

ಗುರುವಾರ ನಡೆದ ದಾಳಿಗೂ ಇಸ್ಲಾಮಿಕ್ ಸ್ಟೇಟ್ ಗುಂಪು ಹಿಂದೆ ನಡೆಸಿದ್ದ ದಾಳಿಗೂ ಸಾಮ್ಯವಿದೆ. ಆದರೆ, ಅಮೆರಿಕ ಸೇನೆ ನೆರವಿನಲ್ಲಿ ಇರಾಕ್ ಪಡೆಗಳು ಐಎಸ್‌ ವಿರುದ್ಧ ಕಾರ್ಯಾಚರಣೆ ನಡೆಸಿದ್ದ ಬಳಿಕ ಅಷ್ಟಾಗಿ ಚಟುವಟಿಕೆ ಇರಲಿಲ್ಲ ಎಂದು ಇರಾಕ್‌ ಆರೋಗ್ಯ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT