ಟ್ರಂಪ್ ಹತ್ಯೆ: ಇರಾನ್‌ಗೆ ಒತ್ತಾಯಿಸಿದ್ದ ಶಂಕಿತ
ಡೊನಾಲ್ಡ್ ಟ್ರಂಪ್ ಅವರ ಹತ್ಯೆ ಯತ್ನ ಪ್ರಕರಣದಲ್ಲಿ ಬಂಧಿತನಾಗಿರುವ ರ‍್ಯಾನ್ ವೆಸ್ಲಿ ರೂತ್ ಟ್ರಂಪ್ ಅವರನ್ನು ಕೊಲ್ಲುವಂತೆ ಇರಾನ್‌ಗೆ ಒತ್ತಾಯಿಸಿದ್ದರು! ಅವರು ರಚಿಸಿರುವ ‘ಉಕ್ರೇನ್ಸ್ ಅನ್‌ವಿನ್ನೇಬಲ್ ವಾರ್’ ಎಂಬ ಕೃತಿಯಲ್ಲಿ ರೂತ್ ಈ ಬಗ್ಗೆ ಬರೆದಿದ್ದಾರೆ. ಕಳೆದ ವರ್ಷ ಸ್ವತಃ ಅವರೇ ಈ ಪುಸ್ತಕವನ್ನು ಪ್ರಕಟಿಸಿದ್ದಾರೆ. 2021ರ ಜನವರಿ 6ರಂದು ನಡೆದಿದ್ದ ಗಲಭೆ ಹಾಗೂ ಇರಾನ್ ಅಣ್ವಸ್ತ್ರ ಕುರಿತು ಇರಾನ್ ಮೇಲೆ ನಿರ್ಬಂಧ ಹೇರಿದ್ದು ದೊಡ್ಡ ಪ್ರಮಾದ ಎಂದು ತಮ್ಮ ಕೃತಿಯಲ್ಲಿ ಉಲ್ಲೇಖಿಸಿರುವ ರೂತ್ ಈ ವಿಚಾರವಾಗಿ ಡೊನಾಲ್ಟ್ ಟ್ರಂಪ್ ಅವರನ್ನು ಒಬ್ಬ ‘ಮೂರ್ಖ’ ಹಾಗೂ ‘ವಿದೂಷಕ’ ಎಂಬುದಾಗಿ ಟೀಕಿಸಿದ್ದಾರೆ. ‘ಟ್ರಂಪ್ ಅವರನ್ನು ಕೊಲ್ಲಲು ನೀವು ಸ್ವತಂತ್ರರು’ ಎಂದು ಇರಾನ್ ಉದ್ದೇಶಿಸಿ ಹೇಳಿದ್ದಾರೆ. ರಷ್ಯಾ ವಿರುದ್ಧ ಹೋರಾಡುತ್ತಿರುವ ಉಕ್ರೇನ್‌ಗಾಗಿ ಯೋಧರನ್ನು ನೇಮಕ ಮಾಡಲು ಯತ್ನಿಸಿದ್ದಾಗಿಯೂ ಅವರು ತಮ್ಮ ಕೃತಿಯಲ್ಲಿ ಬರೆದುಕೊಂಡಿದ್ದಾರೆ.