ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೂರಿ ಇರಿತ ಪ್ರಕರಣ ನಡೆದಿದ್ದ ಸಿಡ್ನಿ ಶಾಪಿಂಗ್ ಮಾಲ್ ಪುನರಾರಂಭ

Published 18 ಏಪ್ರಿಲ್ 2024, 14:01 IST
Last Updated 18 ಏಪ್ರಿಲ್ 2024, 14:01 IST
ಅಕ್ಷರ ಗಾತ್ರ

ಸಿಡ್ನಿ: ಯುವಕನೊಬ್ಬ ಹಲವರಿಗೆ ಚೂರಿಯಿಂದ ಇರಿದು, ಆರು ಜನ ಮೃತಪಟ್ಟ ಪ್ರಕರಣ ನಡೆದಿದ್ದ ಇಲ್ಲಿನ ಶಾಪಿಂಗ್ ಮಾಲ್ ಗುರುವಾರ ಮತ್ತೆ ಗ್ರಾಹಕರಿಗೆ ತೆರೆದುಕೊಂಡಿತು.

ಕಳೆದ ಶನಿವಾರ ಯುವಕನೊಬ್ಬ ಹದಿನೆಂಟು ಮಂದಿಗೆ ಚೂರಿಯಿಂದ ಚುಚ್ಚಿದ್ದ. ಅವನನ್ನು ಪೊಲೀಸರು ಗುಂಡು ಹಾರಿಸಿ ಕೊಂದಿದ್ದರು. ಕ್ರಿಶ್ಚಿಯನ್‌ ಬಿಷಪ್‌ ಒಬ್ಬರಿಗೆ ಇರಿದ ಆರೋಪದ ಮೇಲೆ 16 ವರ್ಷ ವಯಸ್ಸಿನ ಇನ್ನೊಬ್ಬ ಯುವಕನನ್ನು ಸೋಮವಾರ ಪೊಲೀಸರು ಬಂಧಿಸಿದ್ದರು. 

ಮಾಲ್‌ನಲ್ಲಿ ದಾಳಿ ನಡೆದಾಗ, ಇನ್ನಷ್ಟು ಜನರ ಮೇಲಿನ ಇರಿತ ತಪ್ಪಿಸಲು ಧೈರ್ಯದಿಂದ ಮುನ್ನುಗ್ಗಿದವರನ್ನು ಆಸ್ಟ್ರೇಲಿಯಾ ಪ್ರಧಾನಿ ಆಂಥನಿ ಆಲ್ಬನೀಸ್‌ ಶ್ಲಾಘಿಸಿದ್ದಾರೆ. ಮಾಲ್‌ನ ಭದ್ರತಾ ಸಿಬ್ಬಂದಿ ಮುಹಮ್ಮದ್ ತಾಹಾ ಎನ್ನುವವರು ಪಾಕಿಸ್ತಾನದಿಂದ ವಲಸೆ ಬಂದವರು. ದಾಳಿಕೋರನನ್ನು ತಡೆಯುವ ಭರದಲ್ಲಿ ಅವರೂ ಚೂರಿ ಇರಿತದಿಂದ ಗಾಯಗೊಂಡಿದ್ದರು. ಅವರ ತಾತ್ಕಾಲಿಕ ವೀಸಾ ಅವಧಿ ಇನ್ನೇನು ಮುಗಿಯುವುದರಲ್ಲಿತ್ತು. ಅವರ ಕಾರ್ಯವನ್ನು ಮೆಚ್ಚಿಕೊಂಡಿರುವ ಆಲ್ಬನೀಸ್, ಅವರಿಗೆ ಆಸ್ಟ್ರೇಲಿಯಾ ಪೌರತ್ವ ನೀಡುವುದಾಗಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT