ಗುರಿ ಮುಟ್ಟುವವರೆಗೆ ದಾಳಿ ನಿಲ್ಲದು: ‘ನಮ್ಮ ಗುರಿಯನ್ನು ತಲುಪುವವರೆಗೆ, ಉತ್ತರ ಸಿರಿಯಾದಲ್ಲಿ ಕುರ್ದಿಶ್ ಉಗ್ರರ ವಿರುದ್ಧ ಆರಂಭಿಸಿರುವ ಕಾರ್ಯಾಚರಣೆಯನ್ನು ನಿಲ್ಲಿಸುವುದಿಲ್ಲ’ ಎಂದು ಟರ್ಕಿ ಅಧ್ಯಕ್ಷ ರೆಸಿಪ್ ತಯ್ಯಿಪ್ ಎರ್ಡೊಗನ್ ಮಂಗಳವಾರ ಇಲ್ಲಿ ಹೇಳಿದ್ದಾರೆ. ಕುರ್ದಿಶ್ ಜನರನ್ನು ಭಯೋತ್ಪಾದಕರು ಎಂದೇ ಪರಿಗಣಿಸಿರುವ ಟರ್ಕಿ, ಸಿರಿಯನ್ ಕುರ್ದಿಶ್ ಪೀಪಲ್ಸ್ ಪ್ರೊಟೆಕ್ಷನ್ ಯುನಿಟ್ಸ್ (ವೈಪಿಜಿ) ವಿರುದ್ಧ ನಡೆಸುತ್ತಿರುವ ದಾಳಿ ಈಗ ಏಳನೇ ದಿನಕ್ಕೆ ಕಾಲಿಟ್ಟಿದೆ.