ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೆಚ್ಚು ಸಂಭಾವನೆ ಪಡೆಯುವ ಅಮೆರಿಕ ಸಿಇಒಗಳ ಪಟ್ಟಿಯಲ್ಲಿ ಏಕೈಕ ಭಾರತೀಯ!

Published 26 ಜೂನ್ 2024, 11:30 IST
Last Updated 26 ಜೂನ್ 2024, 11:30 IST
ಅಕ್ಷರ ಗಾತ್ರ

ವಾಷಿಂಗ್ಟನ್: ಅಮೆರಿಕದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಟಾಪ್ 10 ಸಿಇಒಗಳ ಸಾಲಿನಲ್ಲಿ ಭಾರತ ಮೂಲದ ಏಕೈಕ ವ್ಯಕ್ತಿ ಸ್ಥಾನ ಪಡೆದಿದ್ದಾರೆ. ಅದು ಗೂಗಲ್ ಸಿಇಒ ಸುಂದರ್ ಪಿಚೈ ಅಥವಾ ಮೈಕ್ರೊಸಾಫ್ಟ್‌ನ ಸತ್ಯ ನಾದೆಲ್ಲಾ ಯಾರೂ ಅಲ್ಲ. ಪಾಲೊ ಆಲ್ಟೊ ನೆಟ್ವರ್ಕ್‌ನ ಸಿಇಒ ಮತ್ತು ಚೇರ್ಮನ್ ನಿಕೇಶ್ ಅರೋರಾ ಈ ಖ್ಯಾತಿಗೆ ಪಾತ್ರರಾಗಿದ್ದಾರೆ.

ಸಿ-ಸೂಟ್ ಕಾಂಪ್ ಈ ಕುರಿತಂತೆ ವರದಿ ಪ್ರಕಟಿಸಿದೆ. ಈ ಪಟ್ಟಿಯಲ್ಲಿ ನಿಕೇಶ್ 10ನೇ ಸ್ಥಾನ ಪಡೆದಿದ್ದಾರೆ. ಸುಂದರ್ ಪಿಚೈ ಮತ್ತು ಸತ್ಯ ನಾದೆಲ್ಲ ಇಬ್ಬರೂ ಈ ಪಟ್ಟಿಗಳಲ್ಲಿ ಸ್ಥಾನ ಪಡೆದಿಲ್ಲ.

ವಾರ್ಷಿಕವಾಗಿ ನಿಕೇಶ್ ಅರೋರಾ 266.4 ಮಿಲಿಯನ್ ಡಾಲರ್(ಸುಮಾರು ₹2226 ಕೋಟಿ) ಸಂಭಾವನೆ ಪಡೆಯುತ್ತಾರೆ.

ಅಧಿಕ ಸಂಭಾವನೆ ಪಡೆಯುವ ಅಮೆರಿಕದ ಸಿಇಒಗಳ ಸಾಲಿನಲ್ಲಿ ಟೆಸ್ಲಾ ಸಿಇಒ ಇಲಾನ್ ಮಸ್ಕ್ ಮೊದಲ ಸ್ಥಾನದಲ್ಲಿದ್ದು, 2023ರಲ್ಲಿ ಅವರು 1.4 ಬಿಲಿಯನ್ ಡಾಲರ್ ಸಂಭಾವನೆ ಪಡೆದಿದ್ದಾರೆ. 1 ಬಿಲಿಯನ್ ಡಾಲರ್ ಸಂಭಾವನೆ ದಾಟಿದ ಮತ್ತೊಬ್ಬ ಸಿಇಒ ಅಂದರೆ ಪಲಾಂಟಿರ್ ಟೆಕ್ನಾಲಜಿಯ ಸಿಇಒ ಅಲೆಗ್ಯಾಂಡರ್ ಕಾರ್ಪ್.

ಅತಿ ಹೆಚ್ಚು ಸಂಭಾವನೆ ಪಡೆಯುವ ಅಮೆರಿಕದ ಸಿಇಒಗಳ ಪಟ್ಟಿ ಇಂತಿದೆ.

* ಇಲಾನ್ ಮಸ್ಕ್, – ಟೆಸ್ಲಾ –1.4 ಬಿಲಿಯನ್ ಡಾಲರ್

* ಅಲೆಕ್ಸಾಂಡರ್ ಕಾರ್ಪ್ – ಪಾಲಂಟಿರ್ ಟೆಕ್ನಾಲಜೀಸ್ – 1.1 ಬಿಲಿಯನ್ ಡಾಲರ್

* ಹಾಕ್ ಟ್ಯಾನ್ – ಬ್ರಾಡ್ಕಾಮ್ – 767.7 ಮಿಲಿಯನ್ ಡಾಲರ್

* ಬ್ರಿಯಾನ್ ಆರ್ಮ್‌ಸ್ಟ್ರಾಂಗ್ – ಕಾಯಿನ್‌ಬೇಸ್ ಗ್ಲೋಬಲ್ –680.9 ಮಿಲಿಯನ್ ಡಾಲರ್

* ಸಫ್ರಾ ಕ್ಯಾಟ್ಜ್ – ಒರಾಕಲ್ – 304.1 ಮಿಲಿಯನ್ ಡಾಲರ್

* ಬ್ರಿಯಾನ್ ಚೆಸ್ಕಿ – ಏರ್ ಬಿಎನ್‌ಬಿ – 303.5 ಮಿಲಿಯನ್ ಡಾಲರ್

* ಜಾನ್ ವಿಂಕೆಲ್ರೀಡ್ – ಟಿಪಿಜಿ – 295.1 ಮಿಲಿಯನ್ ಡಾಲರ್

* ಜೆಫ್ ಗ್ರೀನ್ – ಟ್ರೇಡ್ ಡೆಸ್ಕ್ – 291.7 ಮಿಲಿಯನ್ ಡಾಲರ್

* ಆಡಮ್ ಫರೋಗಿ – ಅಪ್ಲೋವಿನ್ – 271.3 ಮಿಲಿಯನ್ ಡಾಲರ್

* ನಿಕೇಶ್ ಅರೋರಾ – ಪಾಲೊ ಆಲ್ಟೊ ನೆಟ್ವರ್ಕ್ಸ್ – 266.4 ಮಿಲಿಯನ್ ಡಾಲರ್

ಯಾರು ಈ ನಿಕೇಶ್ ಅರೋರಾ?

ನಿಕೇಶ್ ಅರೋರಾ 2018ರಲ್ಲಿ ಪಾಲೊ ಆಲ್ಟೊ ನೆಟ್‌ವರ್ಕ್‌ನ ಸಿಇಒ ಆಗಿ ಅಧಿಕಾರ ವಹಿಸಿಕೊಂಡರು. ಗೂಗಲ್ ಮತ್ತು ಸಾಫ್ಟ್‌ಬ್ಯಾಂಕ್ ಗ್ರೂಪ್‌ನಲ್ಲೂ ಅವರು ಕೆಲಸ ನಿರ್ವಹಿಸಿದ್ದಾರೆ.

56 ವರ್ಷದ ಅರೋರಾ, ಭಾರತೀಯ ವಾಯುಪಡೆಯ ಅಧಿಕಾರಿಯೊಬ್ಬರ ಮಗ. ದೆಹಲಿಯ ಏರ್ ಫೋರ್ಸ್ ಪಬ್ಲಿಕ್ ಸ್ಕೂಲ್‌ನಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ ಅವರು, ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದಾರೆ. ನಾರ್ತ್‌ಈಸ್ಟರ್ನ್ ವಿಶ್ವವಿದ್ಯಾನಿಲಯದಿಂದ ಎಂಬಿಎ ಮತ್ತು ಬೋಸ್ಟನ್ ಕಾಲೇಜಿನಲ್ಲಿ ಎಂಎಸ್ಸಿ ಪದವಿಯನ್ನೂ ಪಡೆದಿದ್ದಾರೆ.

ಅರೋರಾ ಅವರು 10 ವರ್ಷಗಳ ಕಾಲ ಗೂಗಲ್‌ನಲ್ಲೂ ಉನ್ನತ ಹುದ್ದೆಗಳನ್ನು ನಿರ್ವಹಿಸಿದ್ದಾರೆ. 2014ರಲ್ಲಿ ಅವರು ಸಾಫ್ಟ್‌ಬ್ಯಾಂಕ್ ಗ್ರೂಪ್‌ನ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸೇರಿಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT