ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫ್ಗಾನಿಸ್ತಾನ: ಇಬ್ಬರಿಗೆ ಗುಂಡಿಕ್ಕಿ ಮರಣದಂಡನೆ

Published 22 ಫೆಬ್ರುವರಿ 2024, 11:40 IST
Last Updated 22 ಫೆಬ್ರುವರಿ 2024, 11:40 IST
ಅಕ್ಷರ ಗಾತ್ರ

ಘಜ್ನಿ: ಅಫ್ಗಾನಿಸ್ತಾನದ ತಾಲಿಬಾನ್‌ ಆಡಳಿತವು ಇಲ್ಲಿನ ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಗುರುವಾರ ಕೊಲೆ ಪ್ರಕರಣದಲ್ಲಿ ಅಪರಾಧಿಗಳಾಗಿದ್ದ ಇಬ್ಬರನ್ನು ಬಹಿರಂಗವಾಗಿ ಗುಂಡಿಕ್ಕಿ ಕೊಲ್ಲುವ ಮೂಲಕ ಮರಣದಂಡನೆ ಜಾರಿಗೊಳಿಸಿದೆ.

ಘಜ್ನಿ ನಗರದ ಅಲಿ ಲಾಲ್ ಪ್ರದೇಶದಲ್ಲಿ ಎಪಿ ಪತ್ರಕರ್ತ ಸೇರಿದಂತೆ ಸಾವಿರಾರು ಜನರು ಇದಕ್ಕೆ ಸಾಕ್ಷಿಯಾದರು.

ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಈ ಇಬ್ಬರ ವಿರುದ್ಧ ಕೆಲ ನ್ಯಾಯಾಲಯಗಳು ಮತ್ತು ತಾಲಿಬಾನ್‌ ಪರಮೋಚ್ಚ ನಾಯಕ ಹಿಬತುಲ್ಲಾ ಅಖುಂದ್‌ಝದಾ ಅವರು ಮರಣದಂಡನೆಗೆ ಆದೇಶಿಸಿದ್ದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಮರಣದಂಡನೆ ಜಾರಿಗೊಳಿಸಿದ ಕ್ರೀಡಾಂಗಣದ ಹೊರಗೆ ಭಾರಿ ಸಂಖ್ಯೆಯಲ್ಲಿ ಜನರು ಸೇರಿದ್ದರು. ಅಪರಾಧಿಗಳನ್ನು ಕ್ಷಮಿಸುವಂತೆ ಈ ವೇಳೆ ಧಾರ್ಮಿಕ ಮುಖಂಡರು ಪ್ರಾರ್ಥಿಸಿದರು.

ಮಧ್ಯಾಹ್ನ 1 ಗಂಟೆಗೆ ಶಿಕ್ಷೆಯನ್ನು ಜಾರಿಗೊಳಿಸಲಾಯಿತು. 15 ಗುಂಡುಗಳನ್ನು ಹಾರಿಸಲಾಯಿತು. ಇದರಲ್ಲಿ ಒಬ್ಬರಿಗೆ ಎಂಟು, ಮತ್ತೊಬ್ಬರಿಗೆ ಏಳು ಗುಂಡುಗಳು ತಗುಲಿದವು. ಬಳಿಕ ಆಂಬ್ಯುಲೆನ್ಸ್‌ಗಳಲ್ಲಿ ಮೃತ ದೇಹಗಳನ್ನು ತೆಗೆದುಕೊಂಡು ಹೋಗಲಾಯಿತು.

2021ರಲ್ಲಿ ಅಫ್ಗಾನಿಸ್ತಾನದಲ್ಲಿ ಅಧಿಕಾರ ಪುನರ್‌ ಸ್ಥಾಪಿಸಿದ ತಾಲಿಬಾನ್‌, ಅಲ್ಲಿಂದ ಇಲ್ಲಿಯವರೆಗೆ ಒಟ್ಟು ನಾಲ್ಕು ಜನರನ್ನು ಸಾರ್ವಜನಿಕವಾಗಿ ಮರಣದಂಡನೆಗೆ ಒಳಪಡಿಸಿದಂತಾಗಿದೆ. ಅಫ್ಗಾನಿಸ್ತಾನದಲ್ಲಿ 1990ರ ದಶಕದ ಉತ್ತರಾರ್ಧದಲ್ಲಿ ತಾಲಿಬಾನ್‌ ನಿಯಮಿತವಾಗಿ ಸಾರ್ವಜನಿಕವಾಗಿ ಮರಣದಂಡನೆ, ಥಳಿಸುವಿಕೆ ಮತ್ತು ಕಲ್ಲಿನಲ್ಲಿ ಹೊಡೆಯುವಂತಹ ಶಿಕ್ಷೆಗಳನ್ನು ಜಾರಿಗೊಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT