ಜೀವ ಉಳಿಸಿಕೊಳ್ಳಲು ಓಡಿದ ಹಾಲಿವುಡ್ ತಾರೆಯರು
ಪೆಸಿಫಿಕ್ ಪ್ಯಾಲಿಸೈಡ್ಸ್ ಪ್ರದೇಶದಲ್ಲಿ ಹಾಲಿವುಡ್‌ನ ನೂರಾರು ತಾರೆಯರು ನೆಲೆಸಿದ್ದಾರೆ. ಭಾರಿ ಮೌಲ್ಯದ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಆದರೆ, ಕಾಳ್ಗಿಚ್ಚಿನ ಕಾರಣ ಇವರಲ್ಲಿ ಹಲವರು ಜೀವ ಉಳಿಸಿಕೊಳ್ಳಲು ತಮ್ಮ ಮನೆಗಳನ್ನು ತೊರೆಯಬೇಕಾಗಿ ಬಂದಿತು. ನಟ ಜೇಮ್ಸ್ ವುಡ್ಸ್ ಅವರು ತಮ್ಮ ‘ಎಕ್ಸ್’ನಲ್ಲಿ ವಿಡಿಯೊ ಹಂಚಿಕೊಂಡಿದ್ದಾರೆ. ‘ನನ್ನ ಮನೆ ಇದುವರೆಗೂ ಉಳಿದಿದೆ ಎಂದು ಭಾವಿಸಿಕೊಂಡಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.