ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಡಗಿನ ಮೇಲೆ ದಾಳಿ; ಹುಥಿ ಬಂಡುಕೋರರ ಕೈವಾಡ ಶಂಕೆ

Published : 9 ಆಗಸ್ಟ್ 2024, 12:25 IST
Last Updated : 9 ಆಗಸ್ಟ್ 2024, 12:25 IST
ಫಾಲೋ ಮಾಡಿ
Comments

ದುಬೈ: ಏಡನ್‌ ಕೊಲ್ಲಿ ಹಾಗೂ ಕೆಂಪು ಸಮುದ್ರವನ್ನು ಸಂಪರ್ಕಿಸುವ ಬಾಬ್‌ ಎಲ್‌–ಮಾಂಡೆಬ್‌ ಜಲಸಂಧಿಯ ಬಳಿ ಹಡಗೊಂದರ ಮೇಲೆ ಮೂರು ಸುತ್ತಿನ ದಾಳಿ ನಡೆದಿದ್ದು, ಹುಥಿ ಬಂಡುಕೋರರು ಈ ದಾಳಿ ನಡೆಸಿರುವ ಶಂಕೆ ವ್ಯಕ್ತವಾಗಿದೆ.

ಆದರೆ ಹುಥಿ ಬಂಡುಕೋರರು ದಾಳಿಯ ಹೊಣೆಯನ್ನು ಈವರೆಗೆ ಹೊತ್ತುಕೊಂಡಿಲ್ಲ.

ಮೊದಲಿಗೆ ರಾಕೆಟ್‌ ಚಾಲಿತ ಗ್ರೆನೇಡ್‌ನಿಂದ ಹಡಗಿನ ಮೇಲೆ ಗುರುವಾರ ದಾಳಿ ನಡೆಸಲಾಗಿದೆ. ಶುಕ್ರವಾರ ಮುಂಜಾನೆ ಎರಡನೇ ದಾಳಿ ನಡೆದಿದ್ದು, ಹಡಗಿನ ಸಮೀಪ ಕ್ಷಿಪಣಿಯೊಂದು ಸ್ಫೋಟಗೊಂಡಿದೆ. ಘಟನೆಯಲ್ಲಿ ಹಡಗು ಮತ್ತು ಹಡಗಿನಲ್ಲಿದ್ದ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ಬ್ರಿಟನ್ ಸೇನೆಯ ‘ಬ್ರಿಟಿಷ್ ವ್ಯಾಪಾರ ಕಾರ್ಯಾಚರಣೆಯ ಕೇಂದ್ರ’ವು (ಯುಕೆಎಂಟಿಒ) ಹೇಳಿದೆ.

ಬಂಡುಕೋರರು ಡ್ರೋನ್‌ ಬಳಸಿ ಹಡಗಿನ ಮೇಲೆ ಮೂರನೇ ಬಾರಿಗೆ ದಾಳಿ ನಡೆಸಿದ್ದಾರೆ. ಆಗ, ಹಡಗಿನಲ್ಲಿದ್ದ ಭದ್ರತಾ ಸಿಬ್ಬಂದಿ ಪ್ರತಿದಾಳಿ ನಡೆಸಿ ಅದನ್ನು ನಾಶಪಡಿಸಿದ್ದಾರೆ ಎಂದು ಖಾಸಗಿ ಭದ್ರತಾ ಸಂಸ್ಥೆ ಆ್ಯಂಬ್ರಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT