ವಾಷಿಂಗ್ಟನ್: ಅಕ್ರಮ ವಲಸಿಗರನ್ನು ಸಾಮೂಹಿಕವಾಗಿ ಗಡೀಪಾರು ಮಾಡುವ ಪ್ರಕ್ರಿಯೆ ಬಗ್ಗೆ ಸಮರ್ಥಿಸಿಕೊಂಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘ನಮ್ಮ ಆಡಳಿತವು ವಂಚನೆ ಮಾಡುವವರು, ಮೋಸಗಾರರು, ಜಾಗತಿಕವಾದಿಗಳು, ಮತ್ತು ಅಧಿಕಾರಶಾಹಿಗಳನ್ನು ಮನೆಗೆ ಕಳುಹಿಸಿ ಕೊಳಚೆ ಪ್ರದೇಶವನ್ನು ಬರಿದಾಗಿಸಿದೆ’ ಎಂದಿದ್ದಾರೆ.

ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುತ್ತಲೇ ಟ್ರಂಪ್ ಅಕ್ರಮ ವಲಸಿಗರನ್ನು ಗಡೀಪಾರು ಮಾಡುವುದಾಗಿ ಹೇಳಿದ್ದರು. ಅದರಂತೆ ಭಾರತ ಸೇರಿ ಹಲವು ದೇಶಗಳಿಗೆ ಹಲವರನ್ನು ಗಡೀಪಾರು ಮಾಡಿದ್ದಾರೆ.

ಪೊಲಿಟಿಕಲ್ ಆ್ಯಕ್ಷನ್ ಕಾನ್ಫರೆನ್ಸ್ನಲ್ಲಿ ಮಾತನಾಡಿರುವ ಟ್ರಂಪ್, ‘ವಂಚನೆ ಮಾಡುವವರು, ಸುಳ್ಳು ಹೇಳುವವರು, ಮೋಸ ಮಾಡುವವರು, ಜಾಗತಿಕವಾದಿಗಳು ಮತ್ತು ಆಳವಾಗಿ ಅಧಿಕಾರಶಾಹಿಗಳಾಗಿದ್ದವರನ್ನು ಪ್ಯಾಕ್ ಮಾಡಿ ಕಳುಹಿಸಲಾಗಿದೆ. ಅನ್ಯಲೋಕದ ಅಪರಾಧಿಗಳನ್ನು ಮನೆಗೆ ಕಳುಹಿಸಿ, ಕೊಳಚೆ ಪ್ರದೇಶವನ್ನು ಬರಿದಾಗಿಸಿ, ಜನರಿಂದ ಸರ್ಕಾರವನ್ನು ಮರುಸ್ಥಾಪಿಸಲಾಗುತ್ತಿದೆ’ ಎಂದಿದ್ದಾರೆ.

ಈಗಾಗಲೇ ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿದ್ದ 332 ಭಾರತೀಯ ಮೂಲದವರರನ್ನು ಮೂರು ಬ್ಯಾಚ್ಗಳಲ್ಲಿ ಅಮೆರಿಕದಿಂದ ಭಾರತಕ್ಕೆ ಗಡೀಪಾರು ಮಾಡಲಾಗಿದೆ.
.ಭಾರತದಲ್ಲಿ ಜಗತ್ತಿನಲ್ಲೇ ಅಧಿಕ ತೆರಿಗೆ ದರ: ಡೊನಾಲ್ಡ್ ಟ್ರಂಪ್.₹180 ಕೋಟಿ ಪಡೆದ ಮೋದಿ ಎಂಬ ಟ್ರಂಪ್ ಹೇಳಿಕೆ ಬಗ್ಗೆ ಬಿಜೆಪಿ ಮೌನವೇಕೆ: ಕಾಂಗ್ರೆಸ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.