ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇರಾನ್ ಕಮಾಂಡರ್ ಹತ್ಯೆಗೆ ಆದೇಶ ನೀಡಿದ್ದು ಡೊನಾಲ್ಡ್ ಟ್ರಂಪ್: ಅಮೆರಿಕ ಸೇನೆ

Last Updated 3 ಜನವರಿ 2020, 6:38 IST
ಅಕ್ಷರ ಗಾತ್ರ

ವಾಷಿಂಗ್‌ಟನ್: ಇರಾಕ್ ರಾಜಧಾನಿ ಬಾಗ್ದಾದ್‌ನಲ್ಲಿ ಇರಾನ್‌ ಸೇನೆಯ ಕಮಾಂಡರ್ ಖಾಸಿಂ ಸೋಲೆಮನಿ ಹತ್ಯೆಯನ್ನು ಅಮೆರಿಕ ಸೇನೆಯ ಪ್ರಧಾನ ಕಚೇರಿ ಖಚಿತಪಡಿಸಿದೆ. ಸ್ವತಃಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಈ ದಾಳಿ ಮತ್ತು ಹತ್ಯೆಗೆ ಆದೇಶಿಸಿದ್ದರು ಎಂದು ಸೇನಾಧಿಕಾರಿಗಳುಹೇಳಿದ್ದಾರೆ.

‘ವಿದೇಶಗಳಲ್ಲಿಅಮೆರಿಕ ಪ್ರಜೆಗಳು ಮತ್ತು ಹಿತಾಸಕ್ತಿಗಳನ್ನು ಕಾಪಾಡಲು ನಮ್ಮ ಅಧ್ಯಕ್ಷರು ತೆಗೆದುಕೊಂಡ ಸ್ಪಷ್ಟ ನಿರ್ಧಾರದಂತೆ ಕಾರ್ಯಾಚರಣೆ ನಡೆದಿದೆ’ ಎಂದು ಅಮೆರಿಕ ಸೇನೆ ಸ್ಪಷ್ಟಪಡಿಸಿದೆ.

‘ಇರಾಕ್ ಸೇರಿದಂತೆ ಮಧ್ಯಪ್ರಾಚ್ಯದಲ್ಲಿರುವ ಅಮೆರಿಕ ರಾಜತಾಂತ್ರಿಕರು ಮತ್ತು ಸರ್ಕಾರಿ ಅಧಿಕಾರಿಗಳ ಮೇಲೆ ದಾಳಿ ನಡೆಸಲು ಸೋಲೆಮನಿ ಸಂಚು ರೂಪಿಸುತ್ತಿದ್ದರು.ಅಮೆರಿಕ ಮತ್ತು ಅದರ ಮಿತ್ರಪಡೆಯ ನೂರಾರು ಸೈನಿಕರ ಸಾವಿಗೆ, ಸಾವಿರಾರುನಾಗರಿಕರು ಗಂಭೀರವಾಗಿ ಗಾಯಗೊಳ್ಳಲು ಸೋಲೆಮನಿ ಮತ್ತು ಅವರ ಖದ್ಸ್‌ ಪಡೆ ಕಾರಣ’ ಎಂದು ಅಮೆರಿಕ ರಕ್ಷಣಾ ಇಲಾಖೆ ಆರೋಪ ಮಾಡಿದೆ.

ಸೋಲೆಮನಿ ನಿಧನದ ಸುದ್ದಿ ಖಚಿತವಾಗುತ್ತಿದ್ದಂತೆಯೇ ಟ್ರಂಪ್ ಅಮೆರಿಕದ ಧ್ವಜವನ್ನು ಯಾವುದೇ ಒಕ್ಕಣೆಯಿಲ್ಲದೆ ಟ್ವೀಟ್ ಮಾಡಿದ್ದಾರೆ.

ಬಾಗ್ದಾದ್‌ನಲ್ಲಿ ಖಾಸಿಂ ಸೋಲೆಮನಿಯ ಜೊತೆಗೆ ಮೃತಪಟ್ಟವರನ್ನು ಇರಾಕ್‌ನ ಪ್ರಭಾವಿ ಅರೆಸೇನಾಪಡೆ ಹಶೀದ್–ಅಲ್–ಶಾಬಿಯ ಡೆಪ್ಯುಟಿ ಕಮಾಂಡರ್ ಎಂದು ಅಮೆರಿಕ ಸ್ಪಷ್ಟಪಡಿಸಿದೆ.

ಸೇಡಿನ ಸರಪಳಿ

‘ಇರಾನ್‌ ರಹಸ್ಯವಾಗಿಅಣ್ವಸ್ತ್ರ ತಯಾರಿಕೆಯಲ್ಲಿ ತೊಡಗಿಸಿಕೊಂಡಿದೆ’ ಎಂದು ದೂರುತ್ತಿರುವ ಅಮೆರಿಕ, ಅದರ ವಿರುದ್ಧ ನಾನಾ ದಿಗ್ಬಂಧನ ವಿಧಿಸಿದೆ. ಮಧ್ಯಪ್ರಾಚ್ಯದಲ್ಲಿ ಅಮೆರಿಕದ ನೆಚ್ಚಿನ ಮಿತ್ರರಾಷ್ಟ್ರ ಇಸ್ರೇಲ್‌ಗೆ ಸಹ ಇರಾನ್‌ ಸಶಕ್ತ ಎದುರಾಳಿ. ಈ ಎರಡೂ ದೇಶಗಳು ಒಗ್ಗೂಡಿ ಇರಾನ್‌ ಮಣಿಸಲು ಸತತ ಪ್ರಯತ್ನ ನಡೆಸುತ್ತಲೇ ಇವೆ.

ಐಸಿಸ್ (ಇಸ್ಲಾಮಿಕ್ ಸ್ಟೇಟ್) ದಾಳಿ, ಪ್ರತಿರೋಧ ಹೋರಾಟದ ಸಂದರ್ಭಸಂಘರ್ಷ ತುಸು ತಣಿದಿದೆ ಎನಿಸಿದರೂ ವಸ್ತುಸ್ಥಿತಿ ಹಾಗಿರಲಿಲ್ಲ. ಇದೀಗ ಬಾಗ್ದಾದಿ ಹತ್ಯೆಯ ನಂತರ ಐಸಿಸ್ ವಿರುದ್ಧದ ಹೋರಾಟ ನಿರ್ಣಾಯಕ ಹಂತಕ್ಕೆ ಮುಟ್ಟಿದೆ. ಆದರೆ ಇರಾನ್–ಅಮೆರಿಕ ನಡುವೆ ಇಷ್ಟುದಿನ ಹೊಗೆಯಾಡುತ್ತಿದ್ದ ದ್ವೇಷ ಭಾವನೆ ಮಧ್ಯಪ್ರಾಚ್ಯದಲ್ಲಿ ಪ್ರಜ್ವಲಿಸುತ್ತಿದೆ.

ಇನ್ನಷ್ಟು...

ಡಿಸೆಂಬರ್ 27ರಂದು ಇರಾನ್‌ ನಡೆಸಿದ ರಾಕೆಟ್ ದಾಳಿಇರಾಕ್‌ನಲ್ಲಿ ಕೆಲಸ ಮಾಡುತ್ತಿದ್ದ ಅಮೆರಿಕ ಗುತ್ತಿಗೆದಾರರೊಬ್ಬರನ್ನು ಕೊಂದಿತ್ತು. ಇದಾದ ನಂತರ ಅಮೆರಿಕ ಸೇನೆ ವಾಯುದಾಳಿ ನಡೆಸಿ ಇರಾಕ್‌ನಲ್ಲಿರುವ ಇರಾನ್‌ ಬೆಂಬಲಿಗರ ಜೀವತೆಗೆದಿತ್ತು. ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಇರಾನ್ ಬೆಂಬಲಿಗರು ಅಮೆರಿಕ ರಾಯಭಾರ ಕಚೇರಿಗೆ ಮುತ್ತಿಗೆ ಹಾಕಿ, ಬೆಂಕಿ ಹಚ್ಚಿದ್ದರು. ಇದೆಲ್ಲದರ ಮುಂದುವರಿದ ಭಾಗವಾಗಿ ಇರಾನ್ ಸೇನೆಯ ಪ್ರಭಾವಿಕಮಾಂಡರ್‌ ಖಾಸಿಂ ಸೋಲೆಮನಿಯ ವಾಹನದ ಮೇಲೆ ಅಮೆರಿಕ ಕ್ಷಿಪಣಿ ದಾಳಿ ನಡೆಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT