ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟರ್ಕಿ: ಇರಾಕ್‌, ಸಿರಿಯಾದಲ್ಲಿ ಕುರ್ದಿಶ್‌ ಉಗ್ರರ ನೆಲೆಗಳ ನಾಶ

Last Updated 2 ಫೆಬ್ರುವರಿ 2022, 11:24 IST
ಅಕ್ಷರ ಗಾತ್ರ

ಅಂಕಾರ:ಇರಾಕ್ ಮತ್ತು ಸಿರಿಯಾದಲ್ಲಿನ ಶಂಕಿತ ಕುರ್ದಿಶ್‌ ಭಯೋತ್ಪಾದಕರ ನೆಲೆಗಳನ್ನು ಟರ್ಕಿಯ ಯುದ್ಧವಿಮಾನಗಳು ಬುಧವಾರ ಬೆಳಿಗ್ಗೆ ಹೊಡೆದುರುಳಿಸಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಭಯೋತ್ಪಾದಕರ ಬೆದರಿಕೆಗಳಿಂದ ಟರ್ಕಿಯ ಗಡಿಯನ್ನು ರಕ್ಷಿಸುವ ಪ್ರಯತ್ನದ ಭಾಗವಾಗಿ ಈ ದಾಳಿ ನಡೆದಿದೆ. ಉತ್ತರ ಇರಾಕ್‌ನ ಸಿಂಜಾರ್‌ ಪರ್ವತ ಮತ್ತು ಉತ್ತರ ಸಿರಿಯಾದ ಡೆರಿಕ್‌ ಮತ್ತು ಕರಕಾಕ್‌ ಪ್ರದೇಶಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ ಎಂದು ಟರ್ಕಿಯ ರಕ್ಷಣಾ ಸಚಿವಾಲಯದ ಹೇಳಿಕೆಯೊಂದು ತಿಳಿಸಿದೆ.

ಉತ್ತರ ಇರಾಕ್‌ನಲ್ಲಿನ ಕುರ್ದಿಸ್ತಾನ್‌ ಕಾರ್ಯಕರ್ತರು ಮತ್ತು ಸಿರಿಯಾದಲ್ಲಿನ ಪೀಪಲ್ಸ್‌ ಪ್ರೊಟೆಕ್ಷನ್‌ ಯೂನಿಟ್ಸ್‌ ಅಥವಾ ವೈಪಿಜಿ ಭಯೋತ್ಪಾದಕ ಸಂಘಟನೆಯನ್ನು ದಾಳಿಯು ಗುರಿಯಾಗಿಸಿಕೊಂಡಿತ್ತು. ಭಯೋತ್ಪಾದಕರಿದ್ದ ಗುಹೆಗಳು, ಸುರಂಗಗಳು, ಯುದ್ಧಸಾಮಗ್ರಿ ಸಂಗ್ರಹಾಗಾರಗಳು, ನೆಲೆಗಳು ಮತ್ತು ತರಬೇತಿ ಶಿಬಿರಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಯಿತು ಎಂದು ರಕ್ಷಣಾ ಸಚಿವಾಲಯ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT