ಬೀಜಿಂಗ್: ಕೊಂಪಾಸು ಚಂಡಮಾರುತ ಕಾರಣ ಹಾಂಗ್‌ಕಾಂಗ್‌ನಲ್ಲಿ ಬುಧವಾರ ಶಾಲೆಗಳನ್ನು ಮುಚ್ಚಲಾಗಿದ್ದು, ಷೇರು ಮಾರುಕಟ್ಟೆ ಹಾಗೂ ಸರ್ಕಾರಿ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.

ಹಾಂಗ್‌ಕಾಂಗ್ ನಗರದ ದಕ್ಷಿಣ ಭಾಗದ ಮೂಲದ ಚಂಡಮಾರುತ ಹಾಯ್ದು ಹೋಗಿದೆ. ನಗರದಲ್ಲಿ ಭಾರಿ ಮಳೆಯಾಗುತ್ತಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಜನರು ಸೂಕ್ತ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಸರ್ಕಾರ ಸೂಚಿಸಿದೆ.

ಗಂಟೆಗೆ 83 ಕಿ.ಮೀ. ವೇಗದೊಂದಿಗೆ ಚಂಡಮಾರುತ ಸಾಗುತ್ತಿದೆ. ಕೆಲ ಸಂದರ್ಭಗಳಲ್ಲಿ ವೇಗವನ್ನು ಹೆಚ್ಚಿಸಿಕೊಳ್ಳುತ್ತಿರುವ ಚಂಡಮಾರುತ ಗಂಟೆಗೆ 101 ಕಿ.ಮೀ. ವೇಗದೊಂದಿಗೆ ಮುನ್ನುಗ್ಗುತ್ತಿದೆ ಎಂದು ಹಾಂಗ್‌ಕಾಂಗ್ ಹವಾಮಾನ ಕೇಂದ್ರ ತಿಳಿಸಿದೆ.

ದಕ್ಷಿಣ ಚೀನಾ ಸಮುದ್ರದ ಉತ್ತರ ಭಾಗದ ಮೂಲಕ, ಚೀನಾದ ಹೈನಾನ್ ಪ್ರಾಂತ್ಯದತ್ತ ಚಂಡಮಾರುತ ಸಾಗುವ ನಿರೀಕ್ಷೆ ಇದೆ. ನಂತರ ವಿಯೆಟ್ನಾಂನ ಉತ್ತರ ಭಾಗದಲ್ಲಿ ನೆಲಸ್ಪರ್ಶ ಮಾಡುವುದು ಎಂದುಹವಾಮಾನ ಕೇಂದ್ರ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.