ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಷ್ಯಾ ಮತ್ತು ಉಕ್ರೇನ್‌ ಸಂಘರ್ಷ: ಏರಲಿದೆ ಗೋಧಿ, ಗ್ಯಾಸ್‌ ಬೆಲೆ

Last Updated 7 ಮಾರ್ಚ್ 2022, 20:43 IST
ಅಕ್ಷರ ಗಾತ್ರ

ಲಂಡನ್ (ಎಎಫ್‌ಪಿ):ರಷ್ಯಾ ಮತ್ತು ಉಕ್ರೇನ್‌ ಸಂಘರ್ಷದಲ್ಲಿ ತೊಡಗಿರುವ ಕಾರಣ ಜಾಗತಿಕವಾಗಿ ಸೂರ್ಯ
ಕಾಂತಿ ಎಣ್ಣೆ, ಕಚ್ಚಾ ಎಣ್ಣಿಯಷ್ಟೇ ಅಲ್ಲದೆ, ಗೋಧಿ, ನೈಸರ್ಗಿಕ ಅನಿಲ, ಅಲ್ಯೂಮಿನಿಯಂ, ನಿಕಲ್‌, ಟಿಟಾನಿಯಂ
ಗಳ ಬೆಲೆಯೂ ಏರಿಕೆಯಾಗುತ್ತಿದೆ.

ಪಾಶ್ಚಿಮಾತ್ಯ ದೇಶಗಳು ಮಾಸ್ಕೊ ಮೇಲೆ ಹೇರಿರುವ ನಿರ್ಬಂಧಗಳ ಪರಿಣಾಮ ಇವುಗಳ ಬೆಲೆಯಲ್ಲಿ ಏರಿಕೆ ದಾಖಲಾಗುತ್ತಿದೆ ಎಂದುಎ.ಜೆ ಬೆಲ್ ಹೂಡಿಕೆಯ ನಿರ್ದೇಶಕ ರಸ್ ಮೋಲ್ಡ್ ತಿಳಿಸಿದ್ದಾರೆ.

ಪಲಾಡಿಯಂ, ವಜ್ರ, ನೈಸರ್ಗಿಕ ಅನಿಲ, ತೈಲ, ಪ್ಲಾಟಿನಂ, ಪೊಟ್ಯಾಶ್, ಅಲ್ಯೂಮಿನಿಯಂ, ಚಿನ್ನ, ನಿಕಲ್ ಮತ್ತು ಸ್ಟೀಲ್‌ ಅನ್ನು ಉತ್ಪಾದಿಸುವ ಜಗತ್ತಿನ ಐದನೇ ದೊಡ್ಡ ದೇಶ ರಷ್ಯಾ ಆಗಿದೆ. ಹೀಗಾಗಿ ಜಾಗತಿಕ ಮಟ್ಟದಲ್ಲಿ ವಿವಿಧ ಕಂಪನಿಗಳು ಅಥವಾ ಗ್ರಾಹಕರು ರಷ್ಯಾ ಮೇಲೆ ಅವಲಂಬಿತರಾಗಿದ್ದಾರೆ.

13 ಜನ ಸಾವು: ಉಕ್ರೇನ್‌ನ ರಾಜಧಾನಿ ಕೀವ್‌ನಿಂದ ಪಶ್ಚಿಮಕ್ಕೆ 50 ಕಿ.ಮೀ ದೂರದಲ್ಲಿರುವ ಮಕರಿವ್‌ನ ಕೈಗಾರಿಕಾ ಬೇಕರಿಯೊಂದರ ಮೇಲೆ ಸೋಮವಾರ ನಡೆದ ಶೆಲ್‌ ದಾಳಿಯಲ್ಲಿ ಕನಿಷ್ಠ 13 ಜನರು ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT