ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ಯಾಜ್ಯನೀರು ಬಿಡುಗಡೆಗೆ ಅಂತಿಮ ಸಿದ್ಧತೆ: ವಿಶ್ವಸಂಸ್ಥೆ ಪರಮಾಣು ಮುಖ್ಯಸ್ಥರ ಪರಿಶೀಲನೆ

Published 30 ಜೂನ್ 2023, 16:30 IST
Last Updated 30 ಜೂನ್ 2023, 16:30 IST
ಅಕ್ಷರ ಗಾತ್ರ

ಟೋಕಿಯೊ: ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಯ ಮುಖ್ಯಸ್ಥ ರಾಫೆಲ್ ಮರಿಯಾನೋ ಗ್ರಾಸ್ಸಿ ಅವರು ಮುಂದಿನ ವಾರ ಜಪಾನ್‌ಗೆ ಭೇಟಿ ನೀಡಲಿದ್ದು, ಅಲ್ಲಿ ಅವರು ಫುಕುಶಿಮಾ ಪರಮಾಣು ಸ್ಥಾವರದ ಸಂಸ್ಕರಿಸಿದ ವಿಕಿರಣಶೀಲ ತ್ಯಾಜ್ಯನೀರನ್ನು ಫೆಸಿಫಿಕ್ ಮಹಾಸಾಗರಕ್ಕೆ ಬಿಡುಗಡೆ ಮಾಡುವ ಅಂತಿಮ ಸಿದ್ಥತೆ ವೀಕ್ಷಿಸಲಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಆದರೆ, ಫೆಸಿಫಿಕ್ ಮಹಾಸಾಗರಕ್ಕೆ ತ್ಯಾಜ್ಯನೀರು ಬಿಡುಗಡೆಗೆ ಸ್ಥಳೀಯ ಮೀನುಗಾರಿಕಾ ಗುಂಪುಗಳು ಮತ್ತು ನೆರೆಯ ದಕ್ಷಿಣ ಕೊರಿಯಾ, ಚೀನಾ ಮತ್ತು ಫೆಸಿಫಿಕ್ ದ್ವೀಪದ ಕೆಲ ರಾಷ್ಟ್ರಗಳು ಬಲವಾಗಿ ವಿರೋಧಿಸಿವೆ.

ಜುಲೈ 4ರಿಂದ 7ರವರೆಗೆ ಗ್ರಾಸ್ಸಿ ಅವರು ಜಪಾನ್ ಪ್ರವಾಸದಲ್ಲಿದ್ದಾರೆ. ಈ ವೇಳೆ ಅವರು ಪ್ರಧಾನಿ ಫುಮಿಯೊ ಕಿಶಿಡಾ, ಕೈಗಾರಿಕಾ ಸಚಿವ ಯಸುತೋಶಿ ನಿಶಿಮುರಾ ಅವರನ್ನು ಭೇಟಿಯಾಗುವ ನಿರೀಕ್ಷೆ ಇದೆ ಎಂದು ಜಪಾನ್‌ನ ವಿದೇಶಾಂಗ ಸಚಿವ ಯೋಶಿಮಾಸಾ ಹಯಾಶಿ ಹೇಳಿದ್ದಾರೆ.

ತ್ಯಾಜ್ಯನೀರು ಬಿಡುಗಡೆ ವಿರೋಧಿಸಿ ದಕ್ಷಿಣ ಕೊರಿಯಾದ ಸಿಯೋಲ್‌ನಲ್ಲಿ ಪರಿಸರ ಕಾರ್ಯಕರ್ತರು ಶುಕ್ರವಾರ ಜಪಾನ್ ರಾಯಭಾರ ಕಚೇರಿಯ ಹೊರಗೆ ವಿರುದ್ಧ ಪ್ರತಿಭಟನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT