ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸ್ಪೇನ್‌ | ನೈಟ್‌ ಕ್ಲಬ್‌ನಲ್ಲಿ ಬೆಂಕಿ ಅವಘಡ; ಏಳು ಮಂದಿ ಸಾವು

Published : 1 ಅಕ್ಟೋಬರ್ 2023, 14:03 IST
Last Updated : 1 ಅಕ್ಟೋಬರ್ 2023, 14:03 IST
ಫಾಲೋ ಮಾಡಿ
Comments

ಮ್ಯಾಡ್ರಿಡ್‌ : ಆಗ್ನೇಯ ಸ್ಪೇನ್‌ನ ಮುರ್ಸಿಯಾ ನಗರದ ನೈಟ್‌ಕ್ಲಬ್‌ವೊಂದರಲ್ಲಿ ಭಾನುವಾರ ನಸುಕಿನಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಏಳು ಜನರು ಸಾವನ್ನಪ್ಪಿದ್ದು, ಹಲವು ಮಂದಿ ಕಣ್ಮರೆಯಾಗಿರುವ ಶಂಕೆ ಇದೆ. 

ಬೆಂಕಿಯ ಅವಘಡದಲ್ಲಿ ಮತ್ತಷ್ಟು ಜನರು ಸಿಲುಕಿದ್ದು, ಕಣ್ಮರೆಯಾಗಿದ್ದಾರೆ. ಅವರ ರಕ್ಷಣೆಗಾಗಿ ಅಗ್ನಿಶಾಮಕ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಳಿಗ್ಗೆ 6 ಗಂಟೆಗೆ ಬೆಂಕಿ ಕಾಣಿಸಿಕೊಂಡಿದ್ದು, ಈಗ ನಿಯಂತ್ರಣಕ್ಕೆ ತರಲಾಗಿದೆ. ಬೆಂಕಿ ಅವಘಡದ ಕಾರಣ ಪತ್ತೆ ಹಚ್ಚಲು ತುರ್ತು ಸೇವೆಗಳ ವಿಭಾಗದ ಸಿಬ್ಬಂದಿ ಪ್ರಯತ್ನಿಸುತ್ತಿದ್ದಾರೆ ಎಂದು ನಗರದ ಮೇಯರ್ ಜೋಸ್ ಬಲ್ಲೆಸ್ಟಾ ಹೇಳಿದ್ದಾರೆ. 

ನಗರದ ಹೊರವಲಯದ ಅಟಲಾಯಸ್‌ನ ಟೀಟರ್ ನೈಟ್‌ಕ್ಲಬ್‌ನಲ್ಲಿ ಭಾನುವಾರ ನಸುಕಿನಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಹೊಗೆ ಸೇವಿಸಿ ಅಸ್ವಸ್ಥರಾದ ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮುರ್ಸಿಯಾ ನಗರದ ತುರ್ತು ಸೇವೆಗಳ ವಿಭಾಗವು ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ತಿಳಿಸಿದೆ.

ನೈಟ್‌ಕ್ಲಬ್‌ನೊಳಗೆ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಿಯಂತ್ರಿಸುತ್ತಿರುವ, ಬೆಂಕಿಯು ಕ್ಲಬ್‌ನ ಮೇಲ್ಛಾವಣಿಯ ಒಂದು ಭಾಗವನ್ನು ಸುಟ್ಟು ಕರಕಲಾಗಿಸಿರುವ ದೃಶ್ಯಾವಳಿಗಳ ವಿಡಿಯೊ ಅನ್ನು ಅಗ್ನಿಶಾಮಕ ಸೇವೆಯು ‘ಎಕ್ಸ್’ನಲ್ಲಿ ಬಿಡುಗಡೆ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT