ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಂಕು ಏರಿಕೆ: ವರದಿ ಸಲ್ಲಿಸಲು ಚೀನಾಗೆ ಡಬ್ಲ್ಯುಎಚ್‌ಒ ಸೂಚನೆ

Published 23 ನವೆಂಬರ್ 2023, 15:47 IST
Last Updated 23 ನವೆಂಬರ್ 2023, 15:47 IST
ಅಕ್ಷರ ಗಾತ್ರ

ಜೆನೀವಾ: ಉಸಿರಾಟದ ಸಮಸ್ಯೆ ಪ್ರಕರಣಗಳ ಏರಿಕೆ, ಮಕ್ಕಳ ಮೇಲೆ ಅದರ ಪರಿಣಾಮ ಕುರಿತು ವರದಿ ಸಲ್ಲಿಸಲು ವಿಶ್ವ ಆರೋಗ್ಯ ಸಂಘಟನೆಯು (ಡಬ್ಲ್ಯುಎಚ್‌ಒ) ಚೀನಾಗೆ ಕೇಳಿದೆ. ‘ಇದು, ಸಾಮಾನ್ಯ ವಿಚಾರಣೆ’ ಎಂದು ಚೀನಾ ಪ್ರತಿಕ್ರಿಯಿಸಿದೆ.

ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗದ ಅಧಿಕಾರಿಗಳು ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿದ್ದು, ದೇಶದಲ್ಲಿ ಸೋಂಕು ಸಂಬಂಧಿತ ಉಸಿರಾಟದ ಸಮಸ್ಯೆಗಳು ಏರಿಕೆಯಾಗುತ್ತಿದೆ ಎಂದು ಉಲ್ಲೇಖಿಸಿದ್ದರು.

ಕೋವಿಡ್–19 ನಿರ್ಬಂಧಗಳನ್ನು ಹಿಂಪಡೆದ ಬಳಿಕ, ಜ್ವರ, ಮೈಕೈ ನೋವು ಸಮಸ್ಯೆಗಳು ಮುಖ್ಯವಾಗಿ ಮಕ್ಕಳಲ್ಲಿ ಹೆಚ್ಚಾಗಿವೆ. ಇದಕ್ಕೆ ಶ್ವಾಸಕೋಶ ಸಮಸ್ಯೆಗೆ ಕಾರಣವಾಗುವ ಹಾಗೂ ಕೋವಿಡ್‌ಗೆ ಕಾರಣವಾಗುವ ಸೋಂಕು ಕಾರಣ ಎಂದು ತಿಳಿಸಿದೆ.

ಕೋವಿಡ್‌ ಪ್ರಕರಣಗಳನ್ನು ಕುರಿತು ಮುಂದಾಗಿ ಮಾಹಿತಿ ನೀಡುವಲ್ಲಿ ಪಾರದರ್ಶಕತೆ ಕಾಯ್ದುಕೊಂಡಿಲ್ಲ ಎಂಬ ಪ್ರಶ್ನೆಗಳು ಚೀನಾ ಮತ್ತು ವಿಶ್ವ ಆರೋಗ್ಯ ಸಂಘಟನೆಗೆ ಎದುರಾಗಿತ್ತು. ಚೀನಾದ ವುಹಾನ್‌ ಕೋವಿಡ್‌ನ ಕೇಂದ್ರ ಸ್ಥಾನವಾಗಿತ್ತು. 

ಚೀನಾದಲ್ಲಿ ಸೋಂಕು ಪ್ರಕರಣಗಳು ಏರಿಕೆಯಾಗುತ್ತಿವೆ. ಇದು, ಈ ಹಿಂದೆ ಚೀನಾದ ಆಡಳಿತ ವರದಿ ಮಾಡಿದ್ದ ಸೋಂಕಿನ ಸ್ವರೂಪದ ಪ್ರಕರಣಗಳೇ ಅಥವಾ ಭಿನ್ನವಾದುದೇ ಎಂಬುದು ಖಚಿತವಾಗಿಲ್ಲ ಎಂದು ಡಬ್ಲ್ಯುಎಚ್‌ಒ ಅಧಿಕಾರಿಗಳು ತಿಳಿಸಿದ್ದಾರೆ. 

‘ಇದು, ನಿರ್ದಿಷ್ಟವಾಗಿ ಚಳಿಗಾಲದ ಸಮಸ್ಯೆ. ಇದಕ್ಕೆ ನಿರೋಧಕ ಶಕ್ತಿ ಕಡಿಮೆ ಇರುವುದು ಕಾರಣ. ಕಳೆದ ಮೂರು ಚಳಿಗಾಲದಲ್ಲೂ ಇಂತ ಸ್ಥಿತಿ ಇತ್ತು’ ಎಂದು ಹಾಂಗ್‌ಕಾಂಗ್‌ ವಿಶ್ವವಿದ್ಯಾಲಯದ ಸೂಕ್ಷ್ಮಜೀವಿ ಶಾಸ್ತ್ರಜ್ಞ ಬೆನ್‌ ಕೌಲಿಂಗ್ ಅವರು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT