ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕ್ಯಾನ್ಸರ್ ಚಿಕಿತ್ಸೆ; ಸಾರ್ವಜನಿಕವಾಗಿ ಕಾಣಿಸಿಕೊಂಡ ವೇಲ್ಸ್ ರಾಜಕುಮಾರಿ ಕೇಟ್

Published 15 ಜೂನ್ 2024, 16:03 IST
Last Updated 15 ಜೂನ್ 2024, 16:03 IST
ಅಕ್ಷರ ಗಾತ್ರ

ಲಂಡನ್: ಬ್ರಿಟನ್ನಿನ ವೇಲ್ಸ್‌ನ ರಾಜಕುಮಾರಿ ಕೇಟ್ ಅವರು ಬಕಿಂಗ್‌ಹ್ಯಾಂ ಅರಮನೆಯ ಬಾಲ್ಕನಿಯಿಂದ ಮಿಲಿಟರಿ ಪರೇಡ್ ವೀಕ್ಷಿಸಿ, ನೆರೆದಿದ್ದ ಜನರತ್ತ ಶುಕ್ರವಾರ ಕೈಬೀಸಿದರು. ಅವರು ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆದ ನಂತರದಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು ಇದೇ ಮೊದಲು.

42 ವರ್ಷ ವಯಸ್ಸಿನ ಕೇಟ್ ಅವರು ಜನವರಿಯಲ್ಲಿ ಉದರದ ಶಸ್ತ್ರಚಿಕಿತ್ಸೆ ಒಳಗಾದ ನಂತರ ಎರಡು ವಾರ ಆಸ್ಪತ್ರೆಯಲ್ಲಿದ್ದರು. ಇದಾದ ಎರಡು ತಿಂಗಳ ನಂತರ ವಿಡಿಯೊ ಸಂದೇಶವನ್ನು ರವಾನಿಸಿದ ಅವರು ತಮಗೆ ಕ್ಯಾನ್ಸರ್ ಇರುವುದಾಗಿ, ಮುನ್ನೆಚ್ಚರಿಕೆಯ ಭಾಗವಾಗಿ ಕಿಮೊಥೆರಪಿಗೆ ಒಳಗಾಗಿರುವುದಾಗಿ ತಿಳಿಸಿದ್ದರು. ಈಗಲೂ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT