ವಾಷಿಂಗ್ಟನ್ : ಫ್ಲಾರಿಡಾದ ಗಲ್ಫ್ ಕೋಸ್ಟ್‌ಗೆ ಗುರುವಾರ ರಾತ್ರಿ ಅಪ್ಪಳಿಸಿ ನಂತರ ಉತ್ತರದ ಕಡೆ ಸಾಗಿದ ಹೆಲೆನ್ ಚಂಡಮಾರುತದಿಂದ 600ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ಅಮೆರಿಕ ಗೃಹ ಇಲಾಖೆಯ ಸಲಹೆಗಾರ ಲಿಜ್ ಶರ್ವುಡ್ ರಾಂಡಲ್ ಸೋಮವಾರ ತಿಳಿಸಿದ್ದಾರೆ.
ಕ್ಯಾರೊಲಿನಸ್, ಜಾರ್ಜಿಯಾ, ಟೆನ್ನೆಸ್ಸಿ ಮತ್ತು ವರ್ಜೀನಿಯಾದಲ್ಲಿ ಈಗಾಗಲೇ ಸಾವಿನ ಸಂಖ್ಯೆ ಹೆಚ್ಚಿದೆ ಎಂದು ಮೂಲಗಳು ತಿಳಿಸಿವೆ.