ವಾಷಿಂಗ್ಟನ್: ‘ಪಾಕಿಸ್ತಾನ ಜೊತೆಗಿನ ಪಾಲುದಾರಿಕೆಯನ್ನು ಮತ್ತಷ್ಟು ಹೆಚ್ಚಿಸಲು ಅಮೆರಿಕ ಬಯಸುತ್ತದೆ. ಅದರೆ, ಭಾರತದೊಂದಿಗೆ ಹೊಂದಿರುವ ಐತಿಹಾಸಿಕ ಮತ್ತು ಮಹತ್ವದ ಸಂಬಂಧಕ್ಕೆ ಧಕ್ಕೆ ತಂದುಕೊಂಡು ಇಂತಹ ಬಾಂಧವ್ಯಕ್ಕೆ ನಾವು ಮುಂದಾಗುವುದಿಲ್ಲ’ ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಹೇಳಿದ್ದಾರೆ.

ಆಸಿಯಾನ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಮಲೇಷ್ಯಾದ ಕ್ವಾಲಾಲಂಪುರಕ್ಕೆ ತೆರಳುವ ಮುನ್ನ, ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಈ ವಿಚಾರದಲ್ಲಿ ಭಾರತದ ಆತಂಕ ಸಹಜವಾದುದು. ಆದರೆ, ಅಮೆರಿಕ ಬೇರೆ ಬೇರೆ ದೇಶಗಳೊಂದಿಗೆ ದ್ವಿಪಕ್ಷೀಯ ಸಂಬಂಧ ಹೊಂದಿರಬೇಕಾಗುತ್ತದೆ ಎಂಬುದನ್ನು ಭಾರತ ಅರ್ಥ ಮಾಡಿಕೊಳ್ಳಬೇಕು. ಅದೇ ರೀತಿ ಪಾಕಿಸ್ತಾನದೊಂದಿಗಿನ ರಕ್ಷಣಾ ಸಂಬಂಧ ವೃದ್ಧಿಗೆ ನಾವು ಅವಕಾಶ ಹೊಂದಿದ್ದೇವೆ’ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ರಾಜತಾಂತ್ರಿಕತೆ ಹಾಗೂ ಅದಕ್ಕೆ ಸಂಬಂಧಿಸಿದಂತಹ ವಿಚಾರಗಳಲ್ಲಿ ಭಾರತೀಯರು ಪ್ರಬುದ್ಧರು ಎಂಬುದು ನನ್ನ ಭಾವನೆ. ನಾವು ಸಂಬಂಧ ಹೊಂದಿರದಂತಹ ದೇಶಗಳೊಂದಿಗೆ ಭಾರತ ದ್ವಿಪಕ್ಷೀಯ ಬಾಂಧವ್ಯ ಹೊಂದಿದೆ. ಹೀಗಾಗಿ ಇವೆಲ್ಲಾ ತರ್ಕಬದ್ಧ ಹಾಗೂ ಪ್ರಬುದ್ಧತೆಯಿಂದ ಕೂಡಿದ ವಿದೇಶಾಂಗ ನೀತಿಯ ಭಾಗ’ ಎಂದೂ ರುಬಿಯೊ ಹೇಳಿದರು.

ಭಾರತ ತೈಲ ಖರೀದಿ ನಿಲ್ಲಿಸಲಿದೆ: ಟ್ರಂಪ್ ಪುನರುಚ್ಚಾರ

‘ರಷ್ಯಾದಿಂದ ಕಚ್ಚಾ ತೈಲ ಖರೀದಿಸುವುದನ್ನು ಭಾರತ ಸಂಪೂರ್ಣ ನಿಲ್ಲಿಸಲಿದೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುನರುಚ್ಚರಿಸಿದ್ದಾರೆ. ಆಸಿಯಾನ್ ಶೃಂಗಸಭೆಯಲ್ಲಿ ಪಾಲ್ಗೊಳ್ಳುವುದಕ್ಕಾಗಿ ಕ್ವಾಲಾಲಂಪುರಕ್ಕೆ ಪ್ರಯಾಣಿಸುವ ವೇಳೆ ಅಮೆರಿಕ ವಾಯುಪಡೆ ವಿಮಾನದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ‘ಚೀನಾ ಕೂಡ ರಷ್ಯಾದಿಂದ ಕಚ್ಚಾತೈಲ ಖರೀದಿಸುತ್ತಿದೆ. ಅದು ಕೂಡ ಗಣನೀಯ ಪ್ರಮಾಣದಲ್ಲಿ ಖರೀದಿಯನ್ನು ಕಡಿತ ಮಾಡಲಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.