ಜಿನೀವಾ: ಪರಮಾಣು ಕಾರ್ಯಕ್ರಮದ ಕುರಿತು ಇರಾನ್ ಮತ್ತು ಅಮೆರಿಕ ಗುರುವಾರ ಜಿನೀವಾದಲ್ಲಿ ಮಾತುಕತೆ ಆರಂಭಿಸಿದವು.

ಅಮೆರಿಕ ಜೊತೆಗೆ ಇರಾನ್ ಮಾತುಕತೆಯ ಮಧ್ಯಸ್ಥಿಕೆ ವಹಿಸಿರುವ ಒಮಾನ್ನ ವಿದೇಶಾಂಗ ಸಚಿವ ಬದ್ರ್–ಅಲ್–ಬುಸೈದಿ ಅವರು ಅಮೆರಿಕದ ವಿಶೇಷ ಪ್ರತಿನಿಧಿಗಳಾದ ಸ್ಟೀವ್ ವಿಟ್ಕಾಫ್ ಮತ್ತು ಜೇರೆಡ್ ಕುಶ್ನರ್ ಅವರೊಂದಿಗೆ ಚರ್ಚಿಸಿದರು. ಇದು ಉಭಯ ದೇಶಗಳ ನಡುವಿನ ಮೂರನೇ ಸುತ್ತಿನ ಮಾತುಕತೆಯಾಗಿದೆ.

ಪರಮಾಣು ಒಪ್ಪಂದ ಮಾಡಿಕೊಳ್ಳುವಂತೆ ಅಮೆರಿಕವು ಇರಾನ್ ಮೇಲೆ ಒತ್ತಡ ಹೇರಲು ಮಧ್ಯಪ್ರಾಚ್ಯದಲ್ಲಿ ಯುದ್ಧ ವಿಮಾನ ಮತ್ತು ಯುದ್ಧನೌಕೆಗಳನ್ನು ನಿಯೋಜಿಸಿರುವುದರಿಂದ, ಇದನ್ನು ರಾಜತಾಂತ್ರಿಕತೆಯ ಕೊನೆಯ ಅವಕಾಶವೆಂದು ಪರಿಗಣಿಸಲಾಗಿದೆ.

ಡೊನಾಲ್ಡ್ ಟ್ರಂಪ್ ಅವರು ಇರಾನ್ನ ಪರಮಾಣು ಕಾರ್ಯಕ್ರಮವನ್ನು ನಿರ್ಬಂಧಿಸುವ ಉದ್ದೇಶದಿಂದ ಒಪ್ಪಂದ ಮಾಡಿಕೊಳ್ಳಲು ಬಯಸಿದ್ದಾರೆ. ಕಳೆದ ತಿಂಗಳು ಇರಾನ್ ದೇಶದಾದ್ಯಂತ ನಡೆದ ಪ್ರತಿಭಟನೆಗಳ ನಂತರ ಆಂತರಿಕ ಸಂಘರ್ಷ ಭುಗಿಲೆದ್ದಿದೆ. ಈ ಪರಿಸ್ಥಿತಿಯನ್ನು ಟ್ರಂಪ್ ಅವರು ಒಂದು ಅವಕಾಶವಾಗಿ ನೋಡುತ್ತಿದ್ದಾರೆ.

ಕಳೆದ ವರ್ಷ ನಡೆದ 12 ದಿನಗಳ ಯುದ್ಧದ ಭಾಗವಾಗಿ ಜೂನ್ನಲ್ಲಿ ಟ್ರಂಪ್ ಅವರು ಇರಾನ್ನ ಮೂರು ಪರಮಾಣು ನೆಲೆಗಳ ಮೇಲೆ ದಾಳಿ ನಡೆಸಿದ ನಂತರ ಪರಮಾಣು ಒಪ್ಪಂದ ವಿಫಲವಾಗಿತ್ತು. ಆದರೂ ಯುರೇನಿಯಂ ಸಂಗ್ರಹವನ್ನು ಹೆಚ್ಚಿಸಲು ಬಯಸುವುದಾಗಿ ಇರಾನ್ ಪ್ರತಿಪಾದಿಸಿತ್ತು.

ಅಮೆರಿಕ ದಾಳಿ ನಡೆಸಿದರೆ, ಮಧ್ಯಪ್ರಾಚ್ಯದಲ್ಲಿರುವ ಅದರ ಎಲ್ಲ ಸೇನಾ ನೆಲೆಗಳನ್ನು ಕಾನೂನುಬದ್ಧ ಗುರಿಗಳೆಂದು ಪರಿಗಣಿಸುವುದಾಗಿ ಇರಾನ್ ಹೇಳಿದೆ. ಇದು ಅಮೆರಿಕದ ಹತ್ತು ಸಾವಿರಕ್ಕೂ ಹೆಚ್ಚಿನ ಮಂದಿಯನ್ನು ಅಪಾಯಕ್ಕೆ ದೂಡುತ್ತದೆ. ಇಸ್ರೇಲ್ ಮೇಲೆ ದಾಳಿ ಮಾಡುವುದಾಗಿಯೂ ಇರಾನ್ ಬೆದರಿಕೆ ಹಾಕಿದೆ. ಹೀಗಾಗಿ, ಮಧ್ಯಪ್ರಾಚ್ಯದಾದ್ಯಂತ ಮತ್ತೊಮ್ಮೆ ಪ್ರಾದೇಶಿಕ ಯುದ್ಧ ನಡೆಯುವ ಸಾಧ್ಯತೆ ಇದೆ.

‘ಯಾರಿಗೂ ಗೆಲುವು ಸಿಗುವುದಿಲ್ಲ. ಇದೊಂದು ವಿನಾಶಕಾರಿ ಯುದ್ಧವಾಗಲಿದೆ’ ಎಂದು ಇರಾನ್ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಅವರು ಬುಧವಾರ ಜಿನೀವಾಗೆ ತೆರಳುವ ಮುನ್ನ ತಿಳಿಸಿದ್ದಾರೆ.

‘ಅಮೆರಿಕನ್ನರ ನೆಲೆಗಳು ಈ ಪ್ರದೇಶದ ವಿವಿಧೆಡೆ ಹರಡಿಕೊಂಡಿವೆ. ಇಡೀ ಪ್ರದೇಶವು ಇದರಲ್ಲಿ ಸಿಲುಕಿಕೊಳ್ಳಬಹುದು. ಆದ್ದರಿಂದ ಇದು ಅತ್ಯಂತ ಭಯಾನಕ ಸನ್ನಿವೇಶವಾಗಲಿದೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.