ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದಲ್ಲಿ ಹೆಚ್ಚುತ್ತಿರುವ ದ್ವೇಷ, ಜನಾಂಗೀಯ ತಾರತಮ್ಯ ತಡೆಗೆ ನಿರ್ಣಯ ಮಂಡನೆ

Published 11 ಸೆಪ್ಟೆಂಬರ್ 2023, 13:11 IST
Last Updated 11 ಸೆಪ್ಟೆಂಬರ್ 2023, 13:11 IST
ಅಕ್ಷರ ಗಾತ್ರ

ವಾಷಿಂಗ್ಟನ್‌ : 9/11 ಭಯೋತ್ಪಾದಕ ದಾಳಿಯ ನಂತರ ಅಮೆರಿಕದಾದ್ಯಂತ ಅರಬ್, ಮುಸ್ಲಿಂ, ದಕ್ಷಿಣ ಏಷ್ಯಾ ಮತ್ತು ಸಿಖ್ ಸಮುದಾಯಗಳು ಎದುರಿಸುತ್ತಿರುವ ದ್ವೇಷ, ವರ್ಣಭೇದ ನೀತಿ ತಡೆಗಟ್ಟಲು ಭಾರತೀಯ ಮೂಲದ ಅಮೆರಿಕ ಸಂಸದೆ ಪ್ರಮೀಳಾ ಜಯಪಾಲ್ ಸೇರಿ ಹಲವು ಮಂದಿ ಸಂಸದರ ಗುಂಪು ಸಂಸತ್ತಿನ ಕೆಳಮನೆಯಲ್ಲಿ ನಿರ್ಣಯ ಮಂಡಿಸಿದೆ.

‘ನಾವು ಈ ದುರಂತದ ದಿನವನ್ನು ಸ್ಮರಿಸುವಾಗ, ಅರಬ್, ಮುಸ್ಲಿಂ, ಮಧ್ಯಪ್ರಾಚ್ಯ, ದಕ್ಷಿಣ ಏಷ್ಯಾ ಮತ್ತು ಸಿಖ್ ಸಮುದಾಯಗಳು ಎದುರಿಸುತ್ತಿರುವ ಶಾಶ್ವತ ಹಾನಿಯ ಬಗ್ಗೆಯೂ ಗಮನ ಕೊಡಬೇಕು’ ಎಂದು ಪ್ರಮೀಳಾ ಹೇಳಿದರು.

ದಾಳಿಯ ನಂತರದ ದಿನಗಳಲ್ಲಿ ಬಲ್ಬೀರ್ ಸಿಂಗ್ ಸೋಧಿ, ವಕಾರ್ ಹಸನ್ ಮತ್ತು ಅಡೆಲ್ ಕರಾಸ್ ಅವರ ಹತ್ಯೆಗಳು ದ್ವೇಷದ ಆಘಾತಕಾರಿ ಪ್ರತೀಕಗಳಾಗಿವೆ. ಈ ದೇಶದಲ್ಲಿ ಪರಕೀಯ ದ್ವೇಷ ಮತ್ತು ವರ್ಣಭೇದ ನೀತಿಗೆ ಯಾವುದೇ ಸ್ಥಾನವಿಲ್ಲ ಎಂದು ಅವರು ಹೇಳಿದರು.

2001ರ ಸೆಪ್ಟೆಂಬರ್‌ 11ರಂದು ಅಲ್‌ಕೈದಾ ಉಗ್ರ ಸಂಘಟನೆ ಅಮೆರಿಕದ ವಿಶ್ವ ವ್ಯಾಪಾರ ಕೇಂದ್ರದ ಅವಳಿ ಗೋಪುರಗಳ ಮೇಲೆ ನಡೆಸಿದ ದಾಳಿಯಲ್ಲಿ ಸುಮಾರು 3,000 ಮಂದಿ ಸಾವನ್ನಪ್ಪಿದರು. 

ಈ ದಾಳಿಯ ನಂತರದ ಮೊದಲ ತಿಂಗಳಲ್ಲಿ, ಮಧ್ಯಪ್ರಾಚ್ಯ ಅಥವಾ ದಕ್ಷಿಣ ಏಷ್ಯಾ ಮೂಲದ ಅಮೆರಿಕನ್ನರ ಮೇಲೆ ನಡೆದಿರುವ ಪಕ್ಷಪಾತ ಮತ್ತು ದ್ವೇಷದ 945 ಘಟನೆಗಳನ್ನು ಸಮುದಾಯದ ಸಂಘಟನೆಗಳು ದಾಖಲಿಸಿವೆ. ಈ ದ್ವೇಷದ ವಾತಾವರಣವು ಸಮುದಾಯಗಳ ದೈನಂದಿನ ಜೀವನದಲ್ಲಿ ಮತ್ತು ಅವರ ಕೆಲಸದ ಸ್ಥಳಗಳು, ವ್ಯಾಪಾರಗಳು, ಸಮುದಾಯ ಕೇಂದ್ರಗಳು ಮತ್ತು ಪೂಜಾ ಸ್ಥಳಗಳಲ್ಲಿ ಬೆದರಿಕೆ ಮತ್ತು ಹಿಂಸೆಗೂ ಕಾರಣವಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT