ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುತಿ ಪ್ರಯೋಗಿಸಿದ್ದ ಕ್ಷಿಪಣಿ ನಾಶಪಡಿಸಿದ ಅಮೆರಿಕದ ಧ್ವಂಸಕ

Published 31 ಜನವರಿ 2024, 13:39 IST
Last Updated 31 ಜನವರಿ 2024, 13:39 IST
ಅಕ್ಷರ ಗಾತ್ರ

ಜೆರುಸಲೇಂ (ಎ.ಪಿ): ಯಮೆನ್‌ನ ಹುತಿ ಬಂಡುಕೋರರು ಪ್ರಯೋಗಿಸಿದ್ದ ಹಡಗು ನಿರೋಧಕ ಕ್ಷಿಪಣಿಯನ್ನು ಅಮೆರಿಕದ ನೌಕಾಪಡೆಯ ಧ್ವಂಸಕವು ನಾಶಪಡಿಸಿದೆ. ಇದು, ಅಮೆರಿಕದ ‍ಪಡೆಯನ್ನು ಗುರಿಯಾಗಿಸಿ ನಡೆದ ಹೊಸ ದಾಳಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯುಎಸ್‌ಎಸ್‌ ಗ್ರೇವೆಲೆ ಹೆಸರಿನ ಕ್ಷಿಪಣಿ ಧ್ವಂಸಕವನ್ನೇ ಗುರಿಯಾಗಿಸಿ ಮಂಗಳವಾರ ರಾತ್ರಿ ಹುತಿ ಬಂಡುಕೋರರು ಈ ಕ್ಷಿಪಣಿ ಪ್ರಯೋಗಿಸಿದ್ದರು. ಯಾವುದೇ ರೀತಿ ಹಾನಿ ಸಂಭವಿಸಿಲ್ಲ ಎಂದು ಅಮೆರಿಕ ಸೇನೆಯ ಕೇಂದ್ರೀಯ ಕಮಾಂಡ್‌ನ ಹೇಳಿಕೆ ತಿಳಿಸಿದೆ.

ಹುತಿ ಸೇನೆಯ ವಕ್ತಾರ ಬ್ರಿಗೇಡಿಯರ್ ಜನರಲ್ ಯಾಹ್ಯಾ ಸರೀ ಅವರು, ‘ಈ ದಾಳಿಯನ್ನೇ ಹುತಿ ಸೇನೆ ನಡೆಸಿದ್ದು, ಇದು ಅಮೆರಿಕ–ಬ್ರಿಟಿಷ್‌  ಅತಿಕ್ರಮಣಕ್ಕೆ ಪ್ರತಿರೋಧ ಕ್ರಮವಾಗಿದೆ ಎಂದು ಹೇಳಿದ್ದಾರೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT