ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಚೀನಾ ಸಮುದ್ರ: ಚೀನಾದ ಹಕ್ಕು ಪ್ರತಿಪಾದನೆಗೆ ಅಮೆರಿಕ ತೀವ್ರ ವಿರೋಧ

Last Updated 14 ಜುಲೈ 2020, 11:48 IST
ಅಕ್ಷರ ಗಾತ್ರ

ವಾಷಿಂಗ್ಟನ್: ದಕ್ಷಿಣಚೀನಾ ಸಮುದ್ರದ ಮೇಲೆ ತನ್ನ ಹಕ್ಕು ಪ್ರತಿಪಾದಿಸಿದ್ದ ಚೀನಾದ ನಿಲುವನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಆಡಳಿತ ತಳ್ಳಿಹಾಕಿದೆ.

ಚೀನಾ ಆ ಭಾಗದಮೇಲೆ ಹಕ್ಕು ಪ್ರತಿಪಾದಿಸಿರುವುದಕ್ಕೆ ಯಾವುದೇ ಕಾನೂನು ಆಧಾರವಿಲ್ಲ. ‘ವಿಶ್ವವನ್ನು ನೋಡುವ ಚೀನಾದ ಪರಭಕ್ಷಕ’ ನಿಲುವಿಗೆ 21ನೇ ಶತಮಾನದಲ್ಲಿ ಯಾವುದೇ ಸ್ಥಾನವಿಲ್ಲ ಎಂದೂ ಅಮೆರಿಕ ಪ್ರತಿಪಾದಿಸಿದೆ.

‘ದಕ್ಷಿಣ ಚೀನಾ ಸಮುದ್ರದ ಮೇಲೆ ಹಕ್ಕುಸ್ಥಾಪಿಸಲುಬೀಜಿಂಗ್‍ಗೆ ಜಗತ್ತು ಬಿಡುವುದಿಲ್ಲ. ಅಮೆರಿಕ ಈ ವಿಷಯದಲ್ಲಿ ದಕ್ಷಿಣ ಪೂರ್ವ ಏಷ್ಯಾದ ತನ್ನ ಸಹವರ್ತಿ ದೇಶಗಳ ಜೊತೆಗೆ ನಿಲ್ಲಲಿದೆ. ಸಮುದ್ರ ಭಾಗದ ಸಂಪನ್ಮೂಲ ಕುರಿತ ಅವುಗಳ ಹಕ್ಕು ರಕ್ಷಣೆಗೆ ಬೆಂಬಲ ನೀಡಲಿದೆ’ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್‍ ಪಾಂಪಿಯೊ ತಿಳಿಸಿದರು.

ಸಮುದ್ರದ ಮೇಲಿನ ಸ್ವಾತಂತ್ರ, ಸಾರ್ವಭೌಮತ್ವ ಕುರಿತಂತೆ ಅಮೆರಿಕ ಎಂದಿಗೂ ಅಂತರರಾಷ್ಟ್ರೀಯ ಸಮುದಾಯದ ಜೊತೆಗೆ ನಿಲ್ಲಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT