ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿವಿನಿಂದ ಸಾವು; ಇಥಿಯೋಪಿಯಾ ಸ್ಥಿತಿ ಬಗ್ಗೆ ಅಮೆರಿಕ ಕಳವಳ‌

Published 29 ಜೂನ್ 2023, 14:37 IST
Last Updated 29 ಜೂನ್ 2023, 14:37 IST
ಅಕ್ಷರ ಗಾತ್ರ

ನೈರೋಬಿ (ಎಪಿ): ಅಮೆರಿಕದ ಅಂತರರಾಷ್ಟ್ರೀಯ ಅಭಿವೃದ್ಧಿ ಸಂಸ್ಥೆಯು ಇಥಿಯೋಪಿಯಾದ ಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದೆ.

ಈ ಕುರಿತು ಇ ಮೇಲ್‌‌ ಮೂಲಕ  ಸುದ್ದಿ ಸಂಸ್ಥೆಗೆ ಹೇಳಿಕೆ ನೀಡಿರುವ ಅಮೆರಿಕದ ಸಂಸ್ಥೆಯು, ಆಹಾರದ ನೆರವನ್ನು ತಡೆಹಿಡಿದಿದ್ದು ‘ನೋವಿನ ಸಂಗತಿ’ ಎಂದು ಕರೆದಿದೆ. ‘ದೇಶದಾದ್ಯಂತ ಆಹಾರ ನೆರವಿನ  ಹಂಚುವಿಕೆಯು ವ್ಯಾಪಕ ಪ್ರಮಾಣದಲ್ಲಿರದಿರುವುದು ಹಾಗೂ ಸಮನ್ವಯದ ಕೊರತೆಯ ಹಿನ್ನೆಲೆಯಲ್ಲಿ ಈ ಅಭಾವ ತಲೆದೋರಿದೆ’ ಎಂದು‌ ಹೇಳಿದೆ.

ಅಮೆರಿಕ ಹಾಗೂ ವಿಶ್ವಸಂಸ್ಥೆಯು ಇಥಿಯೋಪಿಯಾಗೆ ಆಹಾರದ ನೆರವು ನೀಡುವುದಕ್ಕೆ ತಾತ್ಕಾಲಿಕ ತಡೆ ನೀಡಿದ ಬಳಿಕ ಹಸಿವಿನಿಂದ ನೂರಾರು ಜನ ಮೃತಪಟ್ಟಿದ್ದಾರೆ ಎಂದು ಅಲ್ಲಿನ ಸ್ಥಳೀಯ ಅಧಿಕಾರಿಗಳು ಹೇಳಿಕೆ ನೀಡಿ‌ದ ಕೆಲವು ದಿನಗಳ ಬೆನ್ನಲ್ಲೇ ಸಂಸ್ಥೆ ಈ ಪ್ರತಿಕ್ರಿಯೆ‌ ನೀಡಿದೆ.‌

ಇಥಿಯೋಪಿಯಾಗೆ ತಾನು ನೀಡಿದ್ದ ಆಹಾರ ಸಾಮಗ್ರಿಗಳು ಕಳುವಾದ ಬಳಿಕ ಅಮೆರಿಕ ಹಾಗೂ ವಿಶ್ವಸಂಸ್ಥೆ ಆಹಾರದ ಪೂರೈಕೆಗೆ ತಾತ್ಕಾಲಿಕ ತಡೆ ನೀಡಿದ್ದವು.

ಈ ಕಳ್ಳತನದ ಕುರಿತು ಅಮೆರಿಕ ಅಧಿಕಾರಿಗಳು ಪ್ರತ್ಯೇಕವಾಗಿ ಪ್ರತಿಕ್ರಿಯೆ ನೀಡಿದ್ದು, ‘ಇದು ಯಾವುದೇ ದೇಶದಲ್ಲಿ ನಡೆದ ಅತ್ಯಂತ ಬೃಹತ್‌ ಕಳ್ಳತನವಾಗಿರ‌ಬಹುದು‌’ ಎಂದಿದ್ದಾರೆ.

ಆದರೆ, ಈ ಕಳ್ಳತನದಲ್ಲಿ ಯಾರು ಶಾಮೀಲಾಗಿದ್ದಾರೆ ಎಂದು ಅಮೆರಿಕವಾಗಲೀ ವಿಶ್ವಸಂಸ್ಥೆಯಾಗಲೀ ಇನ್ನೂ ಹೇಳಿಲ್ಲ. ದೇಣಿಗೆಗೆ ನೀಡಿದ್ದ ಆಹಾರ ಸಾಮಗ್ರಿಗಳು ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಲಭ್ಯವಿದ್ದಾಗ ಕಳುವಿನ ಪ್ರಕರಣಗ ಗಮನಕ್ಕೆ ಬಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT