ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿ ನುಸುಳಲು ವಲಸಿಗರ ಯತ್ನ: ಸಂಚಾರ ಬಂದ್

Last Updated 26 ನವೆಂಬರ್ 2018, 18:05 IST
ಅಕ್ಷರ ಗಾತ್ರ

ತಿಜುವಾನಾ, ಮೆಕ್ಸಿಕೊ: ದಕ್ಷಿಣ ಕ್ಯಾಲಿಫೋರ್ನಿಯಾ ಗಡಿಯಲ್ಲಿ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.

ಅಮೆರಿಕದ ವಲಸೆ ನೀತಿ ಖಂಡಿಸಿ, ವಲಸಿಗರು ಗಡಿಯನ್ನು ಅಕ್ರಮವಾಗಿ ನುಸುಳಲು ಯತ್ನಿಸಿದ ಹಿನ್ನೆಲೆಯಲ್ಲಿ ಅಮೆರಿಕ ಭಾನುವಾರ ಈ ನಿರ್ಧಾರ ತೆಗೆದುಕೊಂಡಿದೆ.

‘ಉತ್ತರ ಮತ್ತು ದಕ್ಷಿಣ ಭಾಗದಲ್ಲಿ ವಾಹನಗಳ ಸಂಚಾರ ಮತ್ತು ಪಾದಚಾರಿ ಮಾರ್ಗಗಳಿಗೆ ನಿರ್ಬಂಧ ವಿಧಿಸಲಾಗಿದೆ’ ಎಂದು ಅಮೆರಿಕ ಭದ್ರತಾ ಇಲಾಖೆ ಟ್ವೀಟ್‌ ಮಾಡಿದೆ.

ಮೆಕ್ಸಿಕೊ ಗಡಿಯನ್ನು ಸಂಪೂರ್ಣವಾಗಿ ಮುಚ್ಚುವುದಾಗಿ ಮೂರೇ ದಿನಗಳ ಹಿಂದೆಯಷ್ಟೆ ಟ್ರಂಪ್‌ ಹೇಳಿದ್ದರು.

ಬಹುತೇಕ ಮಧ್ಯ ಅಮೆರಿಕ ವಲಸಿಗರುಅಮೆರಿಕ ಆಶ್ರಯದ ನಿರೀಕ್ಷೆಯಲ್ಲಿ ತಿಜುವಾನಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾಯುತ್ತಿದ್ದರು.ಅಕ್ರಮವಾಗಿ ನುಸುಳಲು ಯತ್ನಿಸಿದ ಹಲವರನ್ನು ಬಂಧಿಸಲಾಯಿತು.

ಗುಂಪು ಚದುರಿಸಲು ಅಶ್ರುವಾಯು ಪ್ರಯೋಗ ನಡೆಸಲಾಯಿತು. ಇದು ದೇಶದ ಅತಿ ಜನಸಂಚಾರವುಳ್ಳ ಗಡಿಯಾಗಿದ್ದು, ಪ್ರತಿನಿತ್ಯ ಸಾವಿರಾರು ಮಂದಿ ಇಲ್ಲಿ ಸಂಚರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT