ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಇಒಸಿ ಸದಸ್ಯೆಯಾಗಿ ಕಲ್ಪನಾ ಆಯ್ಕೆ; ಕಮಲಾ ಹ್ಯಾರಿಸ್‌ ಟ್ರೈ ಬ್ರೇಕರ್ ಮತದಾನ

Published 13 ಜುಲೈ 2023, 15:19 IST
Last Updated 13 ಜುಲೈ 2023, 15:19 IST
ಅಕ್ಷರ ಗಾತ್ರ

ವಾಷಿಂಗ್ಟನ್: ಅಮೆರಿಕದ ‘ಸಮಾನ ಉದ್ಯೋಗ ಅವಕಾಶ ಆಯೋಗದ (ಇಇಒಸಿ)’ ಸದಸ್ಯೆಯಾಗಿ ಭಾರತ ಮೂಲದ ಕಲ್ಪನಾ ಕೊಟಗಾಳ್‌ ಆಯ್ಕೆಯಾಗಿದ್ದಾರೆ. ಟ್ರೈ ಬ್ರೇಕರ್‌ ಮತ ಚಲಾಯಿಸುವ ಮೂಲಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಆಯ್ಕೆಗೆ ಕಾರಣರಾದರು.

191 ವರ್ಷಗಳ ಹಿಂದೆ ಇಂತಹ ದಾಖಲೆ ನಿರ್ಮಾಣ ಆಗಿತ್ತು. ಆಗ ಉಪಾಧ್ಯಕ್ಷರಾಗಿದ್ದ ಸೆನೆಟ್‌ ಸದಸ್ಯ ಜಾನ್‌ ಸಿ.ಕಾಲ್ಹೌನ್ ಅವರು ಹೀಗೆ ಟ್ರೈ ಬ್ರೇಕರ್‌ ಮತವನ್ನು ಚಲಾಯಿಸಿದ್ದರು.

ಅಮೆರಿಕದಲ್ಲಿ ಉದ್ಯೋಗಾಂಕ್ಷಿಗಳನ್ನು ವರ್ಣ, ಧರ್ಮ, ಲಿಂಗ, ರಾಷ್ಟ್ರೀಯತೆ, ವಯಸ್ಸು (40 ವರ್ಷ ಮೀರಿದವರು), ಅಂಗವಿಕಲತೆ ಆಧಾರದಲ್ಲಿ ತಾರತಮ್ಯ ಆಗದಂತೆ ತಡೆಯಲು ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಹೊಣೆ ಈ ಆಯೋಗದ್ದಾಗಿದೆ. 

ಸೆನೆಟ್‌ನಲ್ಲಿ ಡೆಮಾಕ್ರಾಟಿಕ್‌ ಪಕ್ಷವು 51 ಸದಸ್ಯ ಬಲ ಹೊಂದಿದ್ದು, ರಿಪಬ್ಲಿಕನ್ ಪಕ್ಷ 49 ಸದಸ್ಯರನ್ನು ಹೊಂದಿದೆ. ಕಲ್ಪನಾ ಪರ ಮತ್ತು ವಿರುದ್ಧವಾಗಿ ತಲಾ 50 ಮತ ಬಂದು ಫಲಿತಾಂಶ ಟೈ ಆಗಿತ್ತು. ಆಗ ನಿರ್ಣಾಯಕ ಮತ ಚಲಾಯಿಸುವ ಅಧಿಕಾರ ಉಪಾಧ್ಯಕ್ಷರದಾಗಿದೆ. 

ಬಳಿಕ ಮಾತನಾಡಿದ ಸೆನೆಟ್‌ನ ಮುಖಂಡ ಚುಕ್‌ ಷುಮೆರ್‌ ಅವರು, ‘ಸೆನೆಟ್‌ನ ಇತಿಹಾಸದಲ್ಲಿ ಇದೊಂದು ಚಾರಿತ್ರಿಕ ಸಂದರ್ಭ ಎಂದು ಹೇಳಿದರು‘ ಎಂದು ಹಿಲ್‌ ದಿನಪತ್ರಿಕೆ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT