ನವದೆಹಲಿ: ಕೋವಿಡ್ -19 ತೀವ್ರತೆ ಹೆಚ್ಚಿರುವ ರೋಗಿಗಳಿಗೆ ಎರಡು ಪ್ರತಿಕಾಯ ಚಿಕಿತ್ಸೆಗಳ ಸಂಯೋಜನೆಯನ್ನು ನೀಡಬೇಕು ಎಂದು ಇತ್ತೀಚಿನ ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಡಬ್ಲ್ಯುಎಚ್‌ಒನ ಮಾರ್ಗಸೂಚಿ ಅಭಿವೃದ್ಧಿ ಸಮಿತಿಯು ಕೋವಿಡ್ -19 ಪೀಡಿತ ರೋಗಿಗಳ ಎರಡು ನಿರ್ದಿಷ್ಟ ಗುಂಪುಗಳಿಗೆ ಕ್ಯಾಸಿರಿವಿಮಾಬ್ ಮತ್ತು ಇಮ್‌ಡೆವಿಮಾಬ್ ಪ್ರತಿಕಾಯಗಳನ್ನು ಸಂಯೋಜಿಸುವ ಚಿಕಿತ್ಸೆಯನ್ನು ಶಿಫಾರಸು ಮಾಡಿದೆ.

ಮೊದಲನೆಯದು ತೀವ್ರತರವಲ್ಲದ ಆಸ್ಪತ್ರೆಗೆ ದಾಖಲಾಗಬೇಕಾದ ಕೋವಿಡ್ ರೋಗಿಗಳು. ಎರಡನೆಯವರು ತೀವ್ರವಾದ ಅಥವಾ ನಿರ್ಣಾಯಕ ಹಂತದ ಕೋವಿಡ್ -19 ಹೊಂದಿರುವ ಸೆರೋನೆಗೇಟಿವ್ ಆಗಿದ್ದಾರೆ, ಅಂದರೆ ಅವರ ದೇಹದಲ್ಲಿ ಕೋವಿಡ್ -19 ಗೆ ಪ್ರತಿಕಾಯ ಉತ್ಪಾದನೆ ಆಗುತ್ತಿಲ್ಲ ಎಂಬುದಾಗಿದೆ.

ಮೊದಲ ಶಿಫಾರಸು ಇನ್ನೂ ಉನ್ನತ ಪರಿಶೀಲನೆಗೆ ಒಳಪಡದ ಮೂರು ಪ್ರಯೋಗಗಳ ಹೊಸ ಪುರಾವೆಗಳನ್ನು ಆಧರಿಸಿದೆ.

ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆಯನ್ನು ಕ್ಯಾಸಿರಿವಿಮಾಬ್ ಮತ್ತು ಇಮ್‌ಡಿವಿಮಾಬ್ ಚಿಕಿತ್ಸೆ ಕಡಿಮೆ ಮಾಡಬಹುದು. ಲಸಿಕೆ ಹಾಕಿಸಿಕೊಳ್ಳದ, ವಯಸ್ಸಾದ ಅಥವಾ ರೋಗನಿರೋಧಕ ಶಕ್ತಿಹೀನ ತೀವ್ರ ಅಪಾಯದಲ್ಲಿರುವ ರೋಗಿಗಳಲ್ಲಿ ರೋಗಲಕ್ಷಣಗಳ ಅವಧಿಯನ್ನು ಕಡಿಮೆ ಮಾಡಬಹುದು ಎಂದು ಪ್ರಯೋಗದಲ್ಲಿ ತಿಳಿದುಬಂದಿದೆ.

ಈ ಎರಡು ಪ್ರತಿಕಾಯಗಳು ಬಹುಶಃ ಸಾವಿನ ಸಾಧ್ಯತೆ ಕಡಿಮೆಗೊಳಿಸುವ ಮತ್ತು ಸೆರೋನೆಗೇಟಿವ್ ರೋಗಿಗಳಲ್ಲಿ ಕೃತಕ ಉಸಿರಾಟದ ವ್ಯವಸ್ಥೆಯ ಅವಲಂಬನೆ ತಗ್ಗಿಸುತ್ತದೆ ಎಂಬ ಇನ್ನೊಂದು ಪ್ರಯೋಗದ ದತ್ತಾಂಶವನ್ನು ಆಧರಿಸಿ ಎರಡನೆಯ ಶಿಫಾರಸು ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.