ಕಾಬೂಲ್: ತಾಲಿಬಾನ್ ಉಗ್ರರ ವಶದಲ್ಲಿದಲ್ಲಿರುವ ಅಫ್ಗಾನಿಸ್ತಾನದಿಂದ ಬೇರೆಡೆಗೆ ತೆರಳಲು ಕಾಬೂಲ್ ವಿಮಾನ ನಿಲ್ದಾಣದಲ್ಲಿ ಜನ ಮುಗಿಬಿದ್ದ ವಿಡಿಯೊಗಳನ್ನು ನೋಡಿದ್ದೇವೆ. ಆದರೆ, ಇದಕ್ಕೆ ಅಪವಾದವೆಂಬಂತೆ ಕಾಬೂಲ್‌ನಲ್ಲಿ ಉಳಿದಿರುವ ಏಕೈಕ ಹಿಂದೂ ಅರ್ಚಕರೊಬ್ಬರು ದೇಶ ಬಿಟ್ಟು ಬರುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.

ರತನ್ ನಾಥ್ ದೇವಾಲಯದ ಅರ್ಚಕ ಪಂಡಿತ್ ರಾಜೇಶ್ ಕುಮಾರ್ ಎಂಬವರು ಇಂತಹ ನಿಲುವು ತಳೆದಿತ್ತು. ಸಾಮಾಜಿಕ ಜಾಲತಾಣದಲ್ಲಿ ಚಿತ್ರಗಳು ವೈರಲ್ ಆಗಿವೆ.

ಅಫ್ಗಾನಿಸ್ತಾನದಲ್ಲಿ ತಾಲಿಬಾನ್‌ಗಳು ತಮ್ಮ ಆಕ್ರಮಣವನ್ನು ಮುಂದುವರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕುಮಾರ್ ಅವರನ್ನು ಕಾಬೂಲ್‌ನಿಂದ ಹೊರಹೋಗುವಂತೆ ಒತ್ತಾಯಿಸಲಾಗಿದೆ. ಅಲ್ಲಿರುವ ಹಲವು ಹಿಂದೂಗಳು ಅವರ ಪ್ರಯಾಣ ಮತ್ತು ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲು ಮುಂದಾಗಿದ್ದರು. ಆದರೆ, ದೇವಾಲಯದ ಬಗ್ಗೆ ಅಚಲ ನಿಷ್ಠೆ ಹೊಂದಿರುವ ಅವರು ದೇಗುಲ ಬಿಟ್ಟು ತೆರಳಲು ಸಿದ್ಧರಿಲ್ಲ. ತಪ್ಪಿಸಿಕೊಳ್ಳುವ ಮಾರ್ಗವನ್ನು ಹುಡುಕುತ್ತಿಲ್ಲ.

ಈ ಬಗ್ಗೆ ತಮ್ಮ ಟ್ವಿಟರ್ ಹ್ಯಾಂಡಲ್ @ಭಾರದ್ವಾಜ್ ಸ್ಪೀ್ಕ್ಸ್‌ನಲ್ಲಿ, ಕಾಬೂಲ್ ನ ರತನ್ ನಾಥ್ ದೇವಸ್ಥಾನದ ಅರ್ಚಕ ಪಂಡಿತ್ ರಾಜೇಶ್ ಕುಮಾರ್ ಅವರು ಪ್ರತಿಕ್ರಿಯಿಸಿದ್ದು, ‘ಕೆಲವು ಹಿಂದೂಗಳು ಕಾಬೂಲ್ ಬಿಟ್ಟು ಹೋಗುವಂತೆ ನನ್ನನ್ನು ಒತ್ತಾಯಿಸಿದ್ದಾರೆ. ನನ್ನ ಪ್ರಯಾಣಕ್ಕೆ ಮತ್ತು ಉಳಿಯಲು ಅವಕಾಶ ಮಾಡಿಕೊಡುವುದಾಗಿ ಹೇಳಿದರು. ಆದರೆ, ನನ್ನ ಪೂರ್ವಜರು ನೂರಾರು ವರ್ಷಗಳಿಂದ ಈ ಮಂದಿರಕ್ಕೆ ಸೇವೆ ಸಲ್ಲಿಸಿದ್ದಾರೆ. ನಾನು ಅದನ್ನು ಕೈಬಿಡುವುದಿಲ್ಲ. ತಾಲಿಬಾನ್ ನನ್ನನ್ನು ಕೊಂದರೆ, ನಾನು ಅದನ್ನು ನನ್ನ ಸೇವೆ ಎಂದು ಪರಿಗಣಿಸುತ್ತೇನೆ’. ಎಂದು ಹೇಳಿದ್ಧಾರೆ.

ಭಾನುವಾರ ತಾಲಿಬಾನ್ ಉಗ್ರರು ಅಫ್ಗಾನಿಸ್ತಾನದ ರಾಜಧಾನಿ ಕಾಬೂಲ್‌ಗೆ ದಾಳಿ ಮಾಡುತ್ತಿದ್ದಂತೆ ಅಧ್ಯಕ್ಷ ಅಶ್ರಫ್ ಘನಿ ಪಲಾಯನ ಮಾಡಿದರು. ಬಳಿಕ, ಕಾಬೂಲ್ ಬಿಟ್ಟು ತೆರಳಲು ಸಾವಿರಾರು ಭಯಗ್ರಸ್ತ ಆಫ್ಗಾನ್ ಜನರು ಏರ್‌ಪೋರ್ಟ್‌ಗೆ ಮುಗಿಬಿದ್ದಿದ್ದರು.

ಈ ಮಧ್ಯೆ, ಅಫ್ಗಾನಿಸ್ತಾನದಲ್ಲಿರುವ ಸಿಖ್ ಮತ್ತು ಹಿಂದೂ ಸಮುದಾಯಗಳ ಪ್ರತಿನಿಧಿಗಳೊಂದಿಗೆ ಸಂಪರ್ಕದಲ್ಲಿದ್ದು, ಅವರ ಸುರಕ್ಷತೆ ಮತ್ತು ಸ್ಥಳಾಂತರಕ್ಕೆ ಎಲ್ಲ ರಿತಿಯ ಕ್ರಮ ಕೈಗೊಳ್ಳುವುದಾಗಿ ವಿದೇಶಾಂಗ ಇಲಾಖೆ ತಿಳಿಸಿದೆ.

ಇದನ್ನೂ ಓದಿ.. ತಾಲಿಬಾನ್, ಸಂಬಂಧಿತ ಕಂಟೆಂಟ್ಗಳನ್ನು ನಿಷೇಧಿಸಿದ ಫೇಸ್‌ಬುಕ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.