ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಗಸದಲ್ಲೇ ರಾಕೆಟ್‌ ಉಡಾಯಿಸಬಲ್ಲ ವಿಶ್ವದ ಬೃಹತ್‌ ವಿಮಾನ ಯಶಸ್ವಿ ಹಾರಾಟ

Last Updated 14 ಏಪ್ರಿಲ್ 2019, 7:25 IST
ಅಕ್ಷರ ಗಾತ್ರ

ಕ್ಯಾಲಿಫೋರ್ನಿಯಾ: ಜಗತ್ತಿನ ಅತಿದೊಡ್ಡ ವಿಮಾನ ಎಂಬ ಖ್ಯಾತಿಗೆ ಪಾತ್ರವಾಗಿರುವ ‘ಸ್ಟ್ರಾಟೋಲಾಂಚ್’ ವಿಮಾನ ಶನಿವಾರ ತನ್ನ ಮೊಲದ ಹಾರಾಟವನ್ನು ಯಶಸ್ವಿಯಾಗಿ ಪೂರೈಸಿದೆ. ಎರಡು ವಿಮಾನಗಳನ್ನು ಜೋಡಿಸಿ ನಿರ್ಮಿಸಲಾದ, ಬೃಹತ್‌ ರೆಕ್ಕೆಗಳುಳ್ಳ ಬೋಯಿಂಗ್‌ 747ನ ಆರು ಎಂಜಿನ್‌ಗಳನ್ನು ಹೊಂದಿರುವ ಈ ವಿಮಾನವು ಕ್ಯಾಲಿಫೋರ್ನಿಯಾದಿಂದ ಮೊಜಾವೆ ಮರುಭೂಮಿಗೆ ಯಶಸ್ವಿಯಾಗಿ ಯಾನ ಕೈಗೊಂಡಿತು.‌

ಉಪಗ್ರಹಗಳುಳ್ಳ ರಾಕೆಟ್‌ಗಳನ್ನು ಆಗಸಕ್ಕೆ ಕೊಂಡೊಯ್ದು, ಅಲ್ಲಿಂದ ಅವುಗಳನ್ನು ಉಡಾವಣೆ ಮಾಡಲು ಅನುಕೂಲವಾಗುವಂತೆ ಈ ವಿಮಾನವನ್ನು ತಯಾರಿಸಲಾಗಿದೆ. ಈ ವಿಮಾನವು ರಾಕೆಟ್‌ ಉಡಾವಣೆ ಪ್ರಕ್ರಿಯೆಯನ್ನು ಈಗಿನ ಪ್ರಕ್ರಿಯೆಗಿಂತಲೂ ಸರಳಗೊಳಿಸುವ ವಿಶ್ವಾಸವಿದೆ. ’ಸ್ಕೇಲ್ಡ್‌ ಕಾಂಪೋಸಿಟ್‌’ ಎಂಬ ಸಂಸ್ಥೆಯುಸ್ಟ್ರಾಟೋಲಾಂಚ್ ಅನ್ನು ನಿರ್ಮಾಣ ಮಾಡಿದೆ.

ಸ್ಟ್ರಾಟೋಲಾಂಚ್‌ನ ವಿಶೇಷತೆಗಳೆಂದರೆ, ಇದರ ರೆಕ್ಕೆ ಒಂದು ಫೂಟ್‌ಬಾಲ್‌ ಕ್ರೀಡಾಂಗಣಕ್ಕಿಂತಲೂ ಉದ್ದ. ಏರ್‌ಬಸ್‌ ಎ380 ವಿಮಾನದ ರೆಕ್ಕೆಗಳಿಗಿಂತಲೂ 1.5ರಷ್ಟು ದೊಡ್ಡದಾಗಿವೆ. ಅಂದರೆ ಅದು 117 ಮೀಟರ್‌ಗಳಷ್ಟು ಉದ್ದವಾಗಿದೆ. ಏರ್‌ಬಸ್‌ ವಿಮಾನದ ರೆಕ್ಕೆಗಳ ಉದ್ದ 80 ಮೀಟರ್‌ ಮಾತ್ರ. ಶನಿವಾರ ಪ್ರಪ್ರಥಮ ಬಾರಿಗೆ ಯಾನ ಕೈಗೊಂಡಸ್ಟ್ರಾಟೋಲಾಂಚ್ ಸರಿಸುಮಾರು ಎರಡೂವರೆ ಗಂಟೆ ಕಾಲ ಆಗಸದಲ್ಲಿ ಹಾರಾಡಿದೆ. ಈ ವೇಳೆ ಅದು ಗಂಟೆಗೆ 304 ಕಿ.ಮೀ ವೇಗ ತಲುಪಿ, 17000 ಅಡಿಗಳಷ್ಟು ಎತ್ತರದಲ್ಲಿ ಹಾರಾಟ ನಡೆಸಿದೆ.

ಈ ವಿಮಾನದ ನಿರ್ಮಾಪಕ ಮೈಕ್ರೋಸಾಫ್ಟ್‌ ಸಂಸ್ಥೆಯ ಸಹ ಸಂಸ್ಥಾಪಕ ಪೌಲ್‌ ಅಲೇನ್‌. ಸ್ಟ್ರಾಟೋಲಾಂಚ್ ಎಂಬ ಹೆಸರಿನ ಸಂಸ್ಥೆ ಸ್ಥಾಪಿಸಿ ಅದರ ಮೂಲಕ ಈ ವಿಮಾನ ನಿರ್ಮಾಣ ಮಾಡಿದ್ದಾರೆ. ದುರಾದೃಷ್ಟವಶಾತ್‌ ಅಲೆನ್‌ ಅವರು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಕೊನೆಯುಸಿರೆಳೆದಿದ್ದಾರೆ. ಆದರೆ, ಅವರ ಆಸೆ ಈಡೇರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT