ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪ್ಪು ಸಮುದ್ರ: 2400 ವರ್ಷಗಳಷ್ಟು ಹಳೆಯ ಹಡಗು ಪತ್ತೆ

Last Updated 23 ಅಕ್ಟೋಬರ್ 2018, 14:01 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ವಿಶ್ವದ ಅತ್ಯಂತ ಹಳೆಯದಾದ ಹಡಗೊಂದರ ಪಳೆಯುಳಿಕೆಯನ್ನು ವಿಜ್ಞಾನಿಗಳ ತಂಡ ಕಪ್ಪು ಸಮುದ್ರದ ಆಳದಲ್ಲಿ ಮಂಗಳವಾರ ಪತ್ತೆ ಹಚ್ಚಿದೆ.

ಈ ಬಗ್ಗೆ ನ್ಯೂಯಾರ್ಕ್‌ ಪೋಸ್ಟ್‌ ವರದಿ ಮಾಡಿದ್ದು, ವಿಜ್ಞಾನಿಗಳ ಪ್ರಕಾರ ಇದು ವ್ಯಾಪಾರಿ ಹಡಗು ಆಗಿದ್ದು, ಸುಮಾರು 2400 ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ಸಮುದ್ರದ ತಳದಲ್ಲಿ ಉಳಿದು ಕೊಂಡಿದೆ ಎನ್ನಲಾಗಿದೆ.

ಇಂಗ್ಲೆಂಡ್‌ ಮೂಲದ ವಿಜ್ಞಾನಿಗಳ ತಂಡ ಕಪ್ಪು ಸಮುದ್ರ ಕಡಲತೀರ ಪುರಾತತ್ವ ಅಧ್ಯಯನ ಯೋಜನೆ ಅಡಿಯಲ್ಲಿ ಸಾಗರದಾಳದಲ್ಲಿ ಶೋಧ ಕಾರ್ಯ ನಡೆಸಿತ್ತು. ಬಲ್ಗೇರಿಯಾ ತೀರಪ್ರದೇಶದಿಂದ ಸುಮಾರು 80.4 ಕಿ.ಮೀ ದೂರದಲ್ಲಿ ಈ ಹಡಗು ಪತ್ತೆಯಾಗಿದ್ದು, 75 ಅಡಿಗಳಷ್ಟು ಉದ್ದವಿದೆ.

ಈ ಹಡಗು ಪ್ರಾಚೀನ ಗ್ರೀಕ್‌–ರೋಮನ್ನರ ಕಾಲದಲ್ಲಿ ಸಂಚರಿಸುತ್ತಿತ್ತು ಎಂದು ಅಂದಾಜಿಸಲಾಗಿದೆ. ಸಮುದ್ರದ ಆಳದಲ್ಲಿಆಮ್ಲಜನಕ ಕೊರತೆಯಿರುವುದರಿಂದ ಹಡಗಿನ ಅವಶೇಷಗಳು ಹಾಳಾಗಿಲ್ಲ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ವಿಜ್ಞಾನಿಗಳ ತಂಡಕ್ಕೆ ದೊರೆತಿರುವ ವಸ್ತುಗಳನ್ನು ಬ್ರಿಟಿಷ್‌ ವಸ್ತು ಸಂಗ್ರಹಾಲಯದಲ್ಲಿ ಪ್ರದರ್ಶನಕ್ಕೆ ಇಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT