ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜರ್ದಾರಿಗೆ ಶುಭ ಕೋರಿದ ಚೀನಾ ಅಧ್ಯಕ್ಷ

Published 10 ಮಾರ್ಚ್ 2024, 14:25 IST
Last Updated 10 ಮಾರ್ಚ್ 2024, 14:25 IST
ಅಕ್ಷರ ಗಾತ್ರ

ಬೀಜಿಂಗ್: ಚೀನಾ ಅಧ್ಯಕ್ಷ ಕ್ಸಿ ಪಿನ್‌ಪಿಂಗ್ ಅವರು ಪಾಕಿಸ್ತಾನದ ನೂತನ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರಿಗೆ ಶುಭಾಶಯ ಹೇಳಿದ್ದಾರೆ. 

‘ಉಭಯ ದೇಶಗಳದ್ದು ಅಭೇದ್ಯ ಸಂಬಂಧ. ಇಂತಹ ಸಂಬಂಧ ಇತಿಹಾಸದ ಆಯ್ಕೆ. ಇತ್ತೀಚಿನ ವರ್ಷಗಳಲ್ಲಿ ಎರಡೂ ದೇಶಗಳೂ ಪ್ರಮುಖ ಕ್ಷೇತ್ರಗಳ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಪರಸ್ಪರ ಸಹಕಾರ ನೀಡಿವೆ. ಉನ್ನತ ಮಟ್ಟದ ಮಾತುಕತೆಯಲ್ಲಿ ಪದೇ ಪದೇ ತೊಡಗಿವೆ. ಚೀನಾ–ಪಾಕಿಸ್ತಾನ ಆರ್ಥಿಕ ಕಾರಿಡಾರ್ ನಿರ್ಮಾಣವನ್ನೂ ಮಾಡಿವೆ’ ಎಂದು ಕ್ಸಿ ಪಿನ್‌ಪಿಂಗ್‌ ತಿಳಿಸಿದ್ದಾರೆ.  ‌

ಶೆಹಬಾಜ್ ನವಾಜ್ ಅವರು ಪಾಕಿಸ್ತಾನದ ಪ್ರಧಾನಿಯಾಗಿ ಆಯ್ಕೆಯಾದಾಗಲೂ ಕ್ಸಿ ಪಿನ್‌ಪಿಂಗ್‌ ಅವರು ಶುಭ ಕೋರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT