ಮಕಾವೊ (ಎಪಿ): ಚೀನಾದ ಆಡಳಿತಕ್ಕೆ ಹಸ್ತಾಂತರಿಸಿದ 20ನೇ ವಾರ್ಷಿಕೋತ್ಸವದ ಅಂಗವಾಗಿ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರುಮಕಾವೊಗೆ ಬಂದಿದ್ದು, ನೂತನ ಮುಖ್ಯ ಕಾರ್ಯನಿರ್ವಾಹಕರನ್ನು ಗುರುವಾರ ಭೇಟಿ ಮಾಡಿದರು.

ಪೋರ್ಚ್‌ಗೀಸ್ ಆಡಳಿತದಲ್ಲಿದ್ದ ಮಕಾವೊ ಅನ್ನು ಚೀನಾ ಆಡಳಿತಕ್ಕೆ 20 ವರ್ಷಗಳ ಹಿಂದೆ ಹಸ್ತಾಂತರಿಸಲಾಗಿತ್ತು.

ಮಕಾವೊದಲ್ಲಿ ಬಿಗಿ ಭದ್ರತೆ ಒದಗಿಸಲಾಗಿದ್ದು, ರಾಜಕೀಯ ಹೋರಾಟಗಾರರು, ಸಮೀಪದ ಹಾಂಗ್‌ಕಾಂಗ್‌ನ ಪತ್ರಕರ್ತರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಹಾಂಗ್‌ಕಾಂಗ್‌ನಲ್ಲಿ ಪ್ರಜಾಪ್ರಭುತ್ವದ ಪರ ತಿಂಗಳುಗಟ್ಟಲೆ ಪ್ರತಿಭಟನೆ ನಡೆದಿತ್ತು. ಅದಕ್ಕಾಗಿ ಈ ನಿರ್ಬಂಧನೆ ವಿಧಿಸಲಾಗಿದೆ.

ಮಾಕವೊ ಮತ್ತು ಹಾಂಗ್‌ಕಾಂಗ್ ಎರಡೂ ’ಒಂದು ದೇಶ, ಎರಡು ವ್ಯವಸ್ಥೆಗಳು‘ ಎಂಬ ಚೌಕಟ್ಟಿನಲ್ಲಿ ಆಡಳಿತ ನಡೆಸುತ್ತವೆ. ತಮ್ಮದೇ ಆದ ಕಾನೂನು ಮತ್ತು ಆರ್ಥಿಕ ವ್ಯವಸ್ಥೆಗಳನ್ನು ಹೊಂದಿರುವ ಇವೆರಡರ ರಾಜಕೀಯ ನಾಯಕತ್ವದ ಮೇಲೆ ಬೀಜಿಂಗ್ ಬಿಗಿಯಾದ ನಿಯಂತ್ರಣ ಹೊಂದಿದೆ.

ಮುಖ್ಯ ಕಾರ್ಯನಿರ್ವಾಹಕ ಹೋ ಇಯಾಟ್ ಸೆಂಗ್ ಅವರನ್ನು ಭೇಟಿ ಮಾಡಿದರು. ನಂತರ ಜಿನ್‌ಪಿಂಗ್ ಅವರು ಗುರುವಾರ ಸರ್ಕಾರಿ ಕಟ್ಟಡಕ್ಕೆ ತೆರಳಿ ಸ್ಥಳೀಯ ನಿವಾಸಿಗಳು ಮತ್ತು ಅಧಿಕಾರಿಗಳನ್ನು ಭೇಟಿ ಮಾಡಿದರು. ಶುಕ್ರವಾರ ನಡೆಯುವ 20ನೇ ವಾರ್ಷಿಕೋತ್ಸವದಲ್ಲಿ ಅವರು ಭಾಗವಹಿಸಲಿದ್ದಾರೆ.

’ಮಕಾವೊ ಉತ್ತಮ ಆಡಳಿತ ನಡೆಸುತ್ತಿದ್ದು, ಈ ಪ್ರದೇಶದ ಅಭಿವೃದ್ಧಿಗೆ ನೀಲನಕ್ಷೆ ತಯಾರಿಸಲು ಕೈಜೋಡಿಸಲಾಗುವುದು‘ ಎಂದು ಜಿನ್‌ಪಿಂಗ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.