ಸಾವೊ ಪಾಲೊ (ಎಎಫ್‌ಪಿ): ಅಂಗೋಲಾದ 25 ವರ್ಷದ ಸುಂದರಿ ಲೀಲಾ ಲೋಪ್ಸ್ ಈ ವರ್ಷದ `ವಿಶ್ವ ಸುಂದರಿ~ಯಾಗಿ (ಮಿಸ್ ಯೂನಿವರ್ಸ್) ಆಯ್ಕೆಯಾಗಿದ್ದಾರೆ.

ದಕ್ಷಿಣ ಅಮೆರಿಕದ ಬ್ರೆಜಿಲ್‌ನ ಅತಿ ದೊಡ್ಡ ವಾಣಿಜ್ಯ ನಗರಿಯಾದ ಇಲ್ಲಿ ಸೋಮವಾರ ನಡೆದ ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಲೀಲಾ ಕಿರೀಟವನ್ನು ಮುಡಿಗೇರಿಸಿಕೊಂಡರು. ಉಕ್ರೇನ್, ಫಿಲಿಪ್ಪೀನ್ಸ್, ಚೀನಾ ಹಾಗೂ ತಮ್ಮದೇ ದೇಶದ ಸುಂದರಿಯರಿಂದ ಅವರು ತೀವ್ರ ಸ್ಪರ್ಧೆ ಎದುರಿಸಿದ್ದರು.

ವಿವಿಧ ರಾಷ್ಟ್ರಗಳ 98 ಸುಂದರಿಯರು ಭಾಗವಹಿಸಿದ್ದ 60ನೇ ವರ್ಷದ ಈ ಸ್ಪರ್ಧೆಯನ್ನು ವಿಶ್ವದಾದ್ಯಂತ ಒಂದು ಶತಕೋಟಿ ಜನ ಟಿ.ವಿ ಮೂಲಕ ವೀಕ್ಷಿಸಿದರು. ಕಳೆದ ವರ್ಷದ ವಿಶ್ವ ಸುಂದರಿ ಮೆಕ್ಸಿಕೊದ ಜಿಮೆನಾ ನವರೆಟೆ, ವರ್ಣರಂಜಿತ ಸಮಾರಂಭದಲ್ಲಿ ಲೀಲಾಗೆ ಕಿರೀಟ ತೊಡಿಸಿದರು.

ತಮ್ಮ ಆಯ್ಕೆ ಘೋಷಣೆಯಾಗುತ್ತಿದ್ದಂತೆಯೇ ಆನಂದಭಾಷ್ಪವನ್ನು ಒರೆಸಿಕೊಳ್ಳುತ್ತಾ ಮಾತನಾಡಿದ ಲೀಲಾ, `ನನ್ನ ಮೇಲೀಗ ಗುರುತರ ಹೊಣೆಯಿದೆ. ನನ್ನ ಕಾಲುಗಳು ನೆಲದ ಮೇಲೇ ಇರುವಂತೆ ನೋಡಿಕೊಳ್ಳುತ್ತೇನೆ~ ಎಂದರು.

ಏಡ್ಸ್ ಮತ್ತು ಇತರ ಗಂಭೀರ ಮಾರಣಾಂತಿಕ ಕಾಯಿಲೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ರಾಯಭಾರಿಯಾಗಿ ಕೆಲಸ ಮಾಡಲಿರುವ ಲೀಲಾ, ಒಂದು ವರ್ಷ ಕಾಲ ವಿಶ್ವ ಪರ್ಯಟನೆ ಕೈಗೊಳ್ಳಲಿದ್ದಾರೆ.

`ನಿಮ್ಮ ಶರೀರ ಲಕ್ಷಣಗಳನ್ನು ಬದಲಿಸಿಕೊಳ್ಳಲು ನಿಮಗೊಂದು ಅವಕಾಶ ನೀಡಿದರೆ ನೀವು ಯಾವ ಬದಲಾವಣೆ ಬಯಸುತ್ತೀರಿ~ ಎಂಬ ಪ್ರಶ್ನೆ ಸ್ಪರ್ಧಾ ಸಮಯದಲ್ಲಿ ನಿರ್ಣಾಯಕರಿಂದ ತೂರಿಬಂತು.

ಇದಕ್ಕೆ `ಇಲ್ಲ, ನಾನೇನೂ ಬದಲಾವಣೆ ಬಯಸುವುದಿಲ್ಲ. ದೇವರು ನನಗೀಗ ನೀಡಿರುವುದರಲ್ಲಿಯೇ ಸಂತೃಪ್ತಿ ಇದೆ. ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯಕ್ಕೆ ಆದ್ಯತೆ ನೀಡುತ್ತೇನೆ~ ಎಂದು ಆಕೆ ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.