ವಾಷಿಂಗ್ಟನ್ (ಪಿಟಿಐ): ವಿಶ್ವದ ಶ್ರೀಮಂತ ರಾಷ್ಟ್ರ ಎನಿಸಿಕೊಂಡಿರುವ ಅಮೆರಿಕವೂ ಬರದ ಸ್ಥಿತಿಗೆ ಹೊರತಾಗಿಲ್ಲ. ಕಳೆದ 25 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಅಮೆರಿಕ ಬರದ ದವಡೆಗೆ ಸಿಲುಕಿದೆ ಎಂದು ಅಲ್ಲಿನ ಆಡಳಿತವೇ ಒಪ್ಪಿಕೊಂಡಿದೆ.

ಅಮೆರಿಕದ ಭೀಕರ ಬರದ ಸ್ಥಿತಿ ಬೆಳೆಗಳ ಇಳುವರಿಯಲ್ಲಿ ತೀವ್ರ ಕುಸಿತಕ್ಕೆ ಕಾರಣವಾಗಲಿದ್ದು, ಇದು ಆಹಾರ ಹಣದುಬ್ಬರಕ್ಕೆ ಕಾರಣವಾಗಲಿದೆ ಎಂದು ಒಬಾಮ ಆಡಳಿತದ ಅಧಿಕಾರಿಯೊಬ್ಬರು ಎಚ್ಚರಿಸಿದ್ದಾರೆ.

ಅಮೆರಿಕದ ಶೇ 61ರಷ್ಟು ಕೃಷಿ ಭೂಮಿ ಬರಕ್ಕೆ ತುತ್ತಾಗಿದ್ದು, ಬೆಳೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಶೇ 78ರಷ್ಟು ದ್ವಿದಳ ಧಾನ್ಯ ಬೆಳೆಗಳು ಹಾಗೂ ಶೇ 77 ರಷ್ಟು ಸೋಯಾ ಬೀನ್ಸ್ ಬೆಳೆಯ ಮೇಲೆ ಪ್ರತಿಕೂಲ ಸ್ಥಿತಿ ಉಂಟಾಗಿದ್ದು ಇಳುವರಿ ತೀರಾ ಕುಂಠಿತವಾಗಿದೆ ಎಂದು ಕೃಷಿ ಕಾರ್ಯದರ್ಶಿ ಟಾಮ್ ವಿಲ್‌ಸ್ಯಾಕ್ ಸುದ್ದಿಗಾರರಿಗೆ ತಿಳಿಸಿದರು.

ಬರಸ್ಥಿತಿ ನಿಭಾಯಿಸಲು ಸರ್ಕಾರ ತುರ್ತು ಕ್ರಮವಾಗಿ ಹುಲ್ಲುಗಾವಲು ಪ್ರದೇಶ ಬೆಳೆಸುವುದರೊಂದಿಗೆ ಒಣ ಹುಲ್ಲು ಸಂಗ್ರಹ ವ್ಯವಸ್ಥೆಗೂ ಮುಂದಾಗಿದೆ.

ಇದರಿಂದ ಕೃಷಿಕರಿಗೆ ಒಂದಿಷ್ಟು ಅನುಕೂಲವಾಗಲಿದ್ದು, ಹೆಚ್ಚಿರುವ ಹೈನೋದ್ಯಮ ಉತ್ಪನ್ನಗಳ ದರಗಳಲ್ಲಿ ಕೊಂಚ ಇಳಿಕೆ ಕಂಡುಬರಬಹುದು. ಆದರೆ ಭವಿಷ್ಯದಲ್ಲಿ ಇಂತಹ ಉತ್ಪನ್ನಗಳ ದರ ಹೆಚ್ಚುವ ಅಂದಾಜಿದೆ ಎಂದು ವಿಲ್‌ಸ್ಯಾಕ್ ಅವರು ವಿವರಿಸಿದರು.

ಬರದ ಈ ಸನ್ನಿವೇಶ ಆಂತರಿಕವಾಗಿ ಪ್ರತಿಕೂಲ ಪರಿಣಾಮ ಬೀರುವುದರ ಜತೆಗೆ ಅಮೆರಿಕದ ಕೃಷಿ ಉತ್ಪನ್ನಗಳ ರಫ್ತಿನ ತೀವ್ರ ಕುಸಿತಕ್ಕೂ ಕಾರಣವಾಗುವ ಸಾಧ್ಯತೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.