ಜಿನೀವಾ: ತೀವ್ರ ನಿಗಾ ಘಟಕದಲ್ಲಿರಿಸಿದ ಅವಧಿಪೂರ್ವ ಜನಿಸಿದ ಶಿಶುಗಳ ಮೆದುಳಿನ ಬೆಳವಣಿಗೆ ಉತ್ತೇಜಿಸಲು ಭಾರತೀಯ ಹಾವಾಡಿಗನ ಪುಂಗಿಯ ನಾದ ಸಾಕಷ್ಟು ಪರಿಣಾಮಕಾರಿ ಎಂದು ಸಂಶೋಧನೆಯೊಂದು ಹೇಳಿದೆ.

ನರ–ಮನೋವಿಜ್ಞಾನ ಸಂಬಂಧಿ ಸಮಸ್ಯೆಗಳಿಂದ ಬಳಲುವ ಸಾಧ್ಯತೆ ಹೆಚ್ಚಾಗಿ ಕಂಡು ಬರುವ ಇಂತಹ ಶಿಶು
ಗಳಿಗೆ ಇದು ಸಹಕಾರಿಯಾಗಲಿದೆ ಎಂದು ಜಿನೀವಾ ವಿಶ್ವವಿದ್ಯಾಲಯದ ಸಂಶೋಧಕರು ಅಭಿಪ್ರಾಯ
ಪಟ್ಟಿದ್ದಾರೆ. ತೀವ್ರ ನಿಗಾ ಘಟಕದ ಒತ್ತಡ
ಯುಕ್ತ ವಾತಾವರಣದ ಹೊರತಾ
ಗಿಯೂ ಇಂತಹ ಶಿಶುಗಳ ಮೆದುಳು ಸಾಧ್ಯ
ವಾದಷ್ಟೂ ಬೆಳವಣಿಗೆ ಹೊಂದಲಿ ಎಂಬ ಆಶಯದಿಂದ ಜಿನೀವಾ ವಿವಿ ಸಂಶೋಧಕರ ತಂಡ ಮತ್ತು ಜಿನೀವಾ ವಿವಿ ಆಸ್ಪತ್ರೆಗಳು ಜಂಟಿಯಾಗಿ ಸ್ವಿಟ್ಜರ್ಲೆಂಡಿನಲ್ಲಿ ವಿಶೇಷ ಸಂಗೀತ ಸಂಯೋಜನೆ ಪ್ರಸ್ತುತಪಡಿಸಿವೆ.

ಅಮೆರಿಕದ ‘ಪ್ರೊಸೀಡಿಂಗ್ಸ್ ಆಫ್ ದಿ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್’ ನಲ್ಲಿ ಈ ಸಂಶೋಧನೆ ಪ್ರಕಟವಾಗಿದೆ. ಈ ಸಂಗೀತವನ್ನು ಆಲಿಸಿದ ದಿನ ತುಂಬುವ ಮೊದಲೆ ಜನಿಸಿದ ಶಿಶುಗಳ ನರಮಂಡಲ, ಅದರಲ್ಲೂ ವಿಶೇಷವಾಗಿ ಬಹುತೇಕ ಸಂವೇದನಾ
ಶೀಲ ಮತ್ತು ಅರಿವಿನ ಕಾರ್ಯಗಳಿಗೆ ನೆರವಾಗುವ ನರಜಾಲವು ಉತ್ತಮವಾಗಿ ಬೆಳವಣಿಗೆ ಹೊಂದಿರು
ವುದು ಕಂಡುಬಂದಿದೆ ಎಂದು ಸಂಶೋಧನೆ ತಿಳಿಸಿದೆ.

ಹುಟ್ಟುವಾಗ ಸರಿಯಾಗಿ ಬೆಳವಣಿಗೆ ಹೊಂದಿರದೇ ಇರುವ ಇಂತಹ ಮಕ್ಕಳು ತಾಯಿಯ ಗರ್ಭಕ್ಕಿಂತ ಭಿನ್ನವಾದ ವಾತಾವರಣ ಕಲ್ಪಿಸುವ ಇನ್ಕ್ಯುಬೇಟರ್ನಲ್ಲಿಯೇ ಬೆಳೆಯಬೇಕಿರುತ್ತದೆ. ಪ್ರಚೋದನೆಯ ಕೊರತೆ ಇರುವ ಇಂತಹ ತೀವ್ರ ನಿಗಾ ಘಟಕದ ವಾತಾವರಣದಲ್ಲಿಯೂ ಸಂಗೀತದಂತಹ ಉತ್ತೇಜಕ ಖಂಡಿತ ನೆರವಾಗಬಲ್ಲದು ಎಂದು ಸಂಶೋಧಕರು ವಿವರಿಸಿದ್ದಾರೆ.

ಕಲಿಕೆ, ತಿಳಿವಳಿಕೆಯೊಂದಿಗೆ ಕೈಗೊಳ್ಳಬಹುದಾದ ಕೆಲಸಗಳು, ಸಾಮಾಜಿಕ ಸಂಬಂಧಗಳು ಮತ್ತು ಭಾವನಾತ್ಮಕ ನಿರ್ವಹಣೆ ಎಲ್ಲವೂ ಈ ನರಮಂಡಲದ ಬೆಳವಣಿಗೆ ಮೇಲೆ ಅವಲಂಬಿತವಾಗಿರುತ್ತದೆ. ಈ ಪ್ರಯೋಗಕ್ಕೆ ಒಳಗಾಗಿದ್ದ ಶಿಶು
ಗಳಿಗೆ ಈಗ ಆರು ವರ್ಷ. ಅವರ ಆರಂಭಿಕ ಜೀವನದಲ್ಲಿ ಆಹ್ಲಾದಕರ ಉತ್ತೇಜಕ
ವಾಗಿದ್ದ ಪುಂಗಿ ನಾದದ ಪರಿಣಾಮ ಈಗ ಎಷ್ಟು ಪ್ರಯೋಜನಕ್ಕೆ ಬರುತ್ತಿದೆ ಎಂಬುದನ್ನು ಸಂಶೋಧಕರು ಪರೀಕ್ಷಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.