ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಎಸ್‌ಎ ವಿರುದ್ಧ ದನಿ ಎತ್ತಿದ ಫೇಸ್‌ಬುಕ್‌, ಗೂಗಲ್‌

Last Updated 9 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್‌ (ಪಿಟಿಐ): ಅಮೆರಿಕದ ರಾಷ್ಟ್ರೀಯ ಭದ್ರತಾ ಸಂಸ್ಥೆ (ಎನ್‌­ಎಸ್‌ಎ) ಅಂತರ್ಜಾಲ ಬಳಕೆದಾರರ ಮಾಹಿತಿಗೆ ಕನ್ನ ಹಾಕುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅದರ ಕಾರ್ಯ ವಿಧಾನದಲ್ಲಿ ಬದಲಾವಣೆ  ತರುವಂತೆ  ಬೃಹತ್‌ ತಂತ್ರಜ್ಞಾನ ಸಂಸ್ಥೆಗಳು ಅಧ್ಯಕ್ಷ ಬರಾಕ್‌ ಒಬಾಮ ಮೇಲೆ ಒತ್ತಡ ತಂದಿವೆ.

ಯಾಹೂ, ಗೂಗಲ್‌, ಫೇಸ್‌ಬುಕ್‌, ಟ್ವಿಟ್ಟರ್‌  ಮೈಕ್ರೋಸಾಫ್ಟ್‌ನಂತಹ ಅಂತ­ರ್ಜಾಲ ದಿಗ್ಗಜ ಸಂಸ್ಥೆಗಳು ಇದೇ ಮೊದಲ ಬಾರಿ ತಮ್ಮ ನಡುವಣ ಭಿನ್ನಾ­ಭಿಪ್ರಾಯ ಬದಿಗೊತ್ತಿ ‘ಎನ್‌ಎಸ್‌ಎ’ ಕಾರ್ಯವೈಖರಿಯಲ್ಲಿ ಬದಲಾವಣೆ ತರಲು ಆಗ್ರಹಿ­ಸಿದ್ದಾರೆ.

‘ಸರ್ಕಾರವು ಖಾಸಗಿ ವ್ಯಕ್ತಿಗಳ ಅಂತರ್ಜಾಲ ಬಳಕೆಯ ಮೇಲೆ ಕಣ್ಣಿಟ್ಟಿದೆ. ಇದು ದೇಶದ  ಭದ್ರತೆಗೆ ಒತ್ತು ಕೊಡುವಂತಿದ್ದರೂ, ಬಳಕೆದಾರರ ಖಾಸಗಿತನಕ್ಕೆ ಧಕ್ಕೆ ತರುತ್ತಿದೆ. ಕಣ್ಗಾವಲು ಪ್ರಕ್ರಿಯೆ ಕಾನೂನು ಚೌಕಟ್ಟಿನ ಅಡಿಯಲ್ಲಿಯೇ ನಡೆಯುತ್ತಿದೆ’ ಎನ್ನುವುದನ್ನು ಅಮೆರಿಕ ಸರ್ಕಾರ ದೃಢಪಡಿಸಬೇಕು
‘ಬಳಕೆದಾರರ ಗೋಪ್ಯತೆ ಕಾಪಾಡುವುದು ನಮ್ಮ ಆದ್ಯ ಕರ್ತವ್ಯ. ಸರ್ಕಾರದ ಕಣ್ಗಾವಲಿನಿಂದಾಗಿ ಬಳಕೆದಾರರು ನಮ್ಮ ಮೇಲಿನ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ. ವಿಶ್ವದಾದ್ಯಂತ ಅಂತರ್ಜಾಲ ಬಳಕೆದಾರರ ವಿಶ್ವಾಸವನ್ನು ಪುನರ್‌ಸ್ಥಾಪಿಸುವುದು ಈಗ ಅಮೆರಿಕ ಆಡಳಿತದ ಜವಾಬ್ದಾರಿ’ ಎಂದು ಅಂತರ್ಜಾಲ ದೈತ್ಯ ಯಾಹೂ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT