ಪ್ಯಾರಿಸ್ (ಎಎಫ್‌ಪಿ): ಲಿಬಿಯಾದಲ್ಲಿ ಲೂಟಿ ಮಾಡಲಾದ ಭೂಮಿಯಿಂದ ಗಗನಕ್ಕೆ ಚಿಮ್ಮುವಂತಹ ಕ್ಷಿಪಣಿಗಳು ಅಪಾಯಕಾರಿಯಾದರೂ, ಅವುಗಳನ್ನು ಬಳಸುವುದು ಕಷ್ಟಸಾಧ್ಯ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಲಿಬಿಯಾದಲ್ಲಿ ನಡೆದ ರಾಜಕೀಯ ಗಲಭೆ ಸಂದರ್ಭದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕೊಳ್ಳೆ ಹೊಡೆಯಲಾದ ಈ ಕ್ಷಿಪಣಿಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗಿದೆ. ಇವುಗಳನ್ನು ಆಫ್ರಿಕ ಸಹರ ವಲಯದ ಉಗ್ರರ ಗುಂಪುಗಳು ಕೊಂಡಿರುವ ಸಾಧ್ಯತೆ ಇದೆ. ಆದರೆ ಈ ಉಗ್ರರಿಗೆ ಅವುಗಳ ಬಳಕೆ ವಿಧಾನ ತಿಳಿದಿಲ್ಲ ಆದ್ದರಿಂದ ಆತಂಕ ಪಡುವ ಅಗತ್ಯವಿಲ್ಲ ಎಂದು ತಜ್ಞರು ಹೇಳಿದ್ದಾರೆ.

ಸೋವಿಯತ್ ರಷ್ಯ ತಯಾರಿಸಿದ `ಎಸ್‌ಎ- 7~ ಕ್ಷಿಪಣಿಗಳು ಕಡಿಮೆ ಎತ್ತರಕ್ಕೆ ಜಿಗಿಯುವಂಥದ್ದಾದರೂ ಭಾರಿ ಸ್ಫೋಟ ಮಾಡಿ ಅನೇಕರನ್ನು ಸಾಯಿಸುವ ಸಾಮರ್ಥ್ಯಹೊಂದಿವೆ. ಇವುಗಳನ್ನು ಮಾನವರು ಹೊತ್ತೊಯ್ಯಬಹುದು. ಇಂತಹ ಕ್ಷಿಪಣಿಗಳು ಅಲ್‌ಖೈದಾ ಸಂಘಟನೆಯೊಂದಿಗೆ ನಿಕಟ ಸಂಬಂಧ ಹೊಂದಿರುವ ಉಗ್ರರ ಗುಂಪು ಕೈಗೆ ಸಿಕ್ಕಿರುವುದು ಆತಂಕಕ್ಕೆ ಕಾರಣವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.