ಲಂಡನ್, (ಪಿಟಿಐ): ಬ್ರಿಟನ್ನ ವಾಣಿಜ್ಯ ವಿಮಾನವೊಂದು ಇದೇ ಮೊದಲ ಬಾರಿಗೆ ಖಾದ್ಯ ತೈಲ ಬಳಸಿ ಬರ್ಮಿಂಗ್ಹ್ಯಾಮ್ನಿಂದ ಲ್ಯಾಂಜಾರೋಟ್ಗೆ ಸಂಚರಿಸಿ ಇತಿಹಾಸ ನಿರ್ಮಿಸಿದೆ.

ಥಾಮ್ಸನ್ ಏರ್ವೇಸ್ನ, 232 ಪ್ರಯಾಣಿಕರ ಸಾಮರ್ಥ್ಯದ ವಿಮಾನ ಕಳೆದ ವಾರ ಖಾದ್ಯ ತೈಲವನ್ನು ಇಂಧನವನ್ನಾಗಿ ಬಳಸಿ ಯಶಸ್ವಿಯಾಗಿ ಹಾರಾಟ ನಡೆಸಿದೆ. ಎರಡು ಎಂಜಿನ್ನ 757 ಬೋಯಿಂಗ್ ವಿಮಾನದ ಒಂದು ಎಂಜಿನ್ನಲ್ಲಿ ಬಳಸಿದ ಖಾದ್ಯ ತೈಲವನ್ನು ವಿಶೇಷವಾಗಿ ಸಂಸ್ಕರಿಸಿ ಅರ್ಧದಷ್ಟು ಭಾಗವನ್ನು ತುಂಬಲಾಗಿತ್ತು. ಇನ್ನರ್ಧ ಭಾಗದಲ್ಲಿ ಜೆಟ್ಎ1 ಇಂಧನವನ್ನು ತುಂಬಲಾಗಿತ್ತು.

ಜೈವಿಕ ಮತ್ತು ಮಾಮೂಲಿ ಇಂಧನ ಮಿಶ್ರಣದ ಪ್ರಯೋಗಾರ್ಥ ಹಾರಾಟ ಯಶಸ್ವಿಯಾಗಿ ನಡೆಯಿತು ಎಂದು `ಡೈಲಿ ಮೇಲ್~ ಪತ್ರಿಕೆ ವರದಿ ಮಾಡಿದೆ.

`ಹೋಟೆಲ್ ಮತ್ತು ರೆಸ್ಟೋರೆಂಟ್ಗಳಲ್ಲಿ ಬಳಸಿದ ಖಾದ್ಯ ತೈಲವನ್ನು ಸಂಗ್ರಹಿಸಿ ವಿಶೇಷ ಸಂಸ್ಕರಣ ಘಟಕದಲ್ಲಿ ಅದನ್ನು ಸಂಸ್ಕರಿಸಿ ಬಳಸಲಾಗಿದೆ~ ಎಂದು ಏರ್ವೇಸ್ನ ಗ್ರಾಹಕರ ಸೇವಾ ವಿಭಾಗದ ನಿರ್ದೇಶಕ ಕಾರ್ಲ್ ಗಿಸ್ಸಿಂಗ್ ತಿಳಿಸಿದ್ದಾರೆ.

`ವಿಮಾನದ ಇಂಧನಕ್ಕಿಂತ ಜೈವಿಕ ಇಂಧನ ನಾಲ್ಕೈದು ಪಟ್ಟು ದುಬಾರಿ. ಆದರೂ ಪರಿಸರ ಮಾಲಿನ್ಯ ತಡೆಯುವ ದೃಷ್ಟಿಯಿಂದ ನಮ್ಮ ಸಂಸ್ಥೆ ಈ ಪ್ರಯೋಗಕ್ಕೆ ಮುಂದಾಗಿದೆ. ಇಂತಹ ಜೈವಿಕ ಇಂಧನ ಅಭಿವೃದ್ಧಿಗೆ ಉದ್ಯಮಗಳು ಮತ್ತು ಸರ್ಕಾರ ಹೆಚ್ಚಿನ ಆಸಕ್ತಿ ವಹಿಸಬೇಕು~ ಎಂದು ಹೇಳಿದ್ದಾರೆ.

2012ರಿಂದ ಥಾಮ್ಸನ್ ಏರ್ವೇಸ್ ಜೈವಿಕ ಇಂಧನ ಬಳಸುವ ಕಾರ್ಯಕ್ರಮವನ್ನು ಅಧಿಕೃತವಾಗಿ ಆರಂಭಿಸಲಿದೆ.

`ಬಳಸಿದ ಖಾದ್ಯ ತೈಲ ಮತ್ತಾವುದೇ ಉಪಯೋಗಕ್ಕೆ ಬಾರದಿರುವುದನ್ನು ಗಮನಿಸಿ ಅದನ್ನೇ ಸಂಸ್ಕರಿಸಿ ಇಂಧನವನ್ನಾಗಿ ಬಳಸುವ ಪ್ರಯೋಗ ಮಾಡಲಾಯಿತು~ ಎಂದು ಜೈವಿಕ ಇಂಧನ ಉತ್ಪಾದಿಸುವ ಸ್ಕೈಎನ್ಆರ್ಜಿ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಡಿರ್ಕ್ ಕೋನ್ಮೀಜರ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.