ಈ ವರ್ಷ ಜನವರಿ 23ರಂದು ಚೀನಾದ ಹೊಸ ವರ್ಷದ ದಿನವಾಗಿದ್ದು, ಚೀನಾದಾದ್ಯಂತ ನೆಲೆಸಿರುವ ನಾಗರಿಕರು ತಮ್ಮ ಊರುಗಳಿಗೆ ಹಿಂದಿರುಗಿ ಕುಟುಂಬದೊಂದಿಗೆ ಒಂದು ವಾರದ ಕಾಲ ನಡೆಯುವ ಉತ್ಸವದಲ್ಲಿ ಭಾಗವಹಿಸುತ್ತಾರೆ. ಒಟ್ಟು 40 ದಿನಗಳ ಅವಧಿಯಲ್ಲಿ ಸುಮಾರು 31.6 ಕೋಟಿ ಜನರು ವಿವಿಧ ಸಾರಿಗೆ ವ್ಯವಸ್ಥೆಗಳನ್ನು ಬಳಸುವ ನಿರೀಕ್ಷೆ ಇದೆ.