ಡೀಸೆಲ್ ಕಾರುಗಳು ಭೂವಾತಾವರಣ ಬಿಸಿಯಾಗಲು ಕಾರಣವಾಗುವ ಇಂಗಾಲದ ಅನಿಲವನ್ನು ಕಡಿಮೆ ಉತ್ಪಾದಿಸುತ್ತವೆ. ಆದರೆ ನೈಟ್ರೋಜನ್ ಆಕ್ಸೈಡ್ ಹೆಚ್ಚು ಉತ್ಪಾದಿಸುತ್ತವೆ. ನೈಟ್ರಿಕ್ ಆಕ್ಸೈಡ್ ಮತ್ತು ನೈಟ್ರೋಜನ್ ಆಕ್ಸೈಡ್ಗಳು ಆಮ್ಲ ಮಳೆ ಹಾಗೂ ಉಸಿರುಗಟ್ಟಿಸುವ ಹೊಗೆಗೆ ಕಾರಣವಾಗುತ್ತವೆ. ದೀರ್ಘಕಾಲದಲ್ಲಿ ಇವು ಉಸಿರಾಟದ ತೊಂದರೆ, ಕಣ್ಣುರಿ, ಹಸಿವಾಗದಿರುವಿಕೆ, ಹಲ್ಲಿನ ಸಮಸ್ಯೆ, ತಲೆನೋವು, ಶ್ವಾಸಕೋಶ ಸಂಬಂಧಿ ಸಮಸ್ಯೆಗಳಿಗೆ ಕಾರಣವಾಗುತ್ತವೆ ಎಂದು ಅಧ್ಯಯನ ಹೇಳಿದೆ.