ಕಾಬೂಲ್ನಿಂದ ಬಗ್ರಾಂಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯ ಬಳಿಯ ನೆಲೆಯ ಪ್ರವೇಶದ್ವಾರದ ಬಳಿ ಟ್ರಕ್ ನಲ್ಲಿ ಬಾಂಬ್ ಇಟ್ಟು ಸ್ಫೋಟಿಸಲಾಯಿತು. ಈ ವೇಳೆ ಮೂವರು ಶಸ್ತ್ರಸಹಿತ ಆತ್ಮಾಹುತಿ ದಾಳಿಕೋರರು ಒಳನುಸುಳಲು ಪ್ರಯತ್ನಿಸಿದರು ಎಂದು ಕಾಬೂಲ್ ಪೊಲೀಸ್ ವರಿಷ್ಠಾಧಿಕಾರಿ ಮಹಮ್ಮದ್ ಅಯೂಬ್ ಸಾಲಂಗಿ ವರದಿಗಾರರಿಗೆ ಮಾಹಿತಿ ನೀಡಿದರು.