ನ್ಯೂಯಾರ್ಕ್: ‘ ಬಾಂಬರ್ ಒಬ್ಬ ಇಲ್ಲಿನ ಜನನಿಬಿಡ ಬಸ್ ನಿಲ್ದಾಣದಲ್ಲಿ ಸೋಮವಾರ ಸ್ಫೋಟಿಸಿಕೊಳ್ಳಲು ಯತ್ನಿಸಿದ್ದಾನೆ ‘ ಎಂದು ಇಲ್ಲಿನ ಹಲವು ಮಾಧ್ಯಮಗಳು ವರದಿ ಮಾಡಿವೆ. ಜನರು ಬೆಳಿಗ್ಗೆ ಕಚೇರಿಗೆ ತೆರಳುವ ಸಂದರ್ಭದಲ್ಲೇ ಈ ದಾಳಿ ನಡೆದಿದ್ದರಿಂದ ಈತ ಸೇರಿ ಕೆಲವರು ಗಾಯಗೊಂಡಿದ್ದಾರೆ. ಐ.ಎಸ್‌ನಿಂದ ಪ್ರೇರಣೆಗೊಂಡ ಬಾಂಗ್ಲಾ ಮೂಲದ 27 ವರ್ಷದ ಈ ಯುವಕನನ್ನು ಬಂಧಿಸಲಾಗಿದೆ.

ಮ್ಯಾನ್‌ಹಟನ್‌ನ ಟೈಮ್ಸ್ ಸ್ಕ್ವೇರ್ ಬಳಿ 42ನೇ ಸ್ಟ್ರೀಟ್‌ನ 8ನೇ ರಸ್ತೆಯಲ್ಲಿ ಈ ಸ್ಫೋಟ ಸಂಭವಿಸಿದೆ ಎಂದು ನ್ಯೂಯಾರ್ಕ್ ಪೊಲೀಸರು ಟ್ವೀಟ್ ಮಾಡಿದ್ದಾರೆ. ಸ್ಫೋಟ ಸಂಭವಿಸಿದ ಜಾಗದಲ್ಲಿ ಪ್ರಮುಖ ಬಸ್ ನಿಲ್ದಾಣ, ಮೆಟ್ರೊ ನಿಲ್ದಾಣಗಳೂ ಇವೆ.

‘ಸ್ಫೋಟದ ಬಳಿಕ ಎ, ಸಿ ಹಾಗೂ ಇ ಮಾರ್ಗಗಳಲ್ಲಿದ್ದ ಪ್ರಯಾಣಿಕರನ್ನು ಸ್ಥಳಾಂತರಿಸಲಾಯಿತು. ಯಾವ ಕಾರಣದಿಂದ ಸ್ಫೋಟ ಸಂಭವಿಸಿದೆ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ನ್ಯೂಯಾರ್ಕ್ ಪೊಲೀಸರು ತಿಳಿಸಿದ್ದಾರೆ.

‘ಆರೋಪಿಯು ಬ್ಯಾಟರಿ ಸಂಪರ್ಕ ಹೊಂದಿದ್ದ ಪೈಪ್ ಬಾಂಬ್ ಹಿಡಿದಿದ್ದನು. ಆತನ ಬಳಿಯಿದ್ದ ಉಪಕರಣವನ್ನು ನಿಷ್ಕ್ರಿಯಗೊಳಿಸಲಾಗಿದೆ’ ಹಿರಿಯ ಪೊಲೀಸ್ ಅಧಿಕಾರಿಯ ಹೇಳಿಕೆಯನ್ನು ಉಲ್ಲೇಖಿಸಿ ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.

ಬೆಳಿಗ್ಗೆ 7.19ರ ವೇಳೆಗೆ ಸ್ಫೋಟಕ್ಕೆ ಸಂಬಂಧಿಸಿದಂತೆ ತುರ್ತು ಕರೆ ಸ್ವೀಕರಿಸಲಾಗಿದೆ ನ್ಯೂಯಾರ್ಕ್‌ನ ಅಗ್ನಿಶಾಮಕಪಡೆ ತಿಳಿಸಿದೆ.

‘ರಾಷ್ಟ್ರೀಯ ಭದ್ರತಾ ಪಡೆಯ ಸಿಬ್ಬಂದಿ ಹಾಗೂ ಬಸ್ ನಿಲ್ದಾಣದಲ್ಲಿದ್ದವರು ಹೊರ ನಡೆಯುವಂತೆ ಕೂಗಿಹೇಳಿದರು, ಆತಂಕಕ್ಕೆ ಒಳಗಾಗಿ ಅಲ್ಲಿಂದ ಓಡಿ ಹೊರನಡೆದೆನು’ ಸ್ಫೋಟದ ವೇಳೆ ಸ್ಥಳದಲ್ಲಿದ್ದ ಪ್ರಯಾಣಿಕ ಕೈಥ್ ವೂಡ್‌ಫಿನ್ ತಿಳಿಸಿದ್ದಾರೆ.

ನ್ಯೂಯಾರ್ಕ್‌ನಲ್ಲಿ ನಡೆದ ಸ್ಫೋಟವು ‘ಭಯೋತ್ಪಾದನಾ ದಾಳಿಯ’ ಯತ್ನವಾಗಿದೆ.
–ಬಿಲ್ ಡೆ ಬಾಸ್ಲಿಯೊ, ನ್ಯೂಯಾರ್ಕ್ ಮೇಯರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.