ವಾಷಿಂಗ್ಟನ್ (ಪಿಟಿಐ): ಗಡಾಫಿ ಪದಚ್ಯುತಗೊಂಡು ದೇಶದಿಂದ ಹೊರಹೋದರೂ ತಮ್ಮ ಜನರ ವಿರುದ್ಧ ಎಸಗಿದ ಮಾನವ ಹಕ್ಕು ಉಲ್ಲಂಘನೆಯ ಹೊಣೆಯನ್ನು ಅವರು ಮತ್ತು ಅವರ ಸಹಚರರು ಹೊರಲೇಬೇಕಾಗುತ್ತದೆ ಎಂದು ಅಮೆರಿಕ ಹೇಳಿದೆ.

ಅಧಿಕಾರ ತ್ಯಜಿಸುವವರು ತಮ್ಮ ಒಳಿತಿಗಾಗಿ ದೇಶ ತೊರೆಯುವುದೇ ಸೂಕ್ತ ಎಂದು ಭಾವಿಸಬಹುದು. ಆದರೆ ಲಿಬಿಯಾದಿಂದ ಹೊರ ಹೋದ ಮಾತ್ರಕ್ಕೆ ಅಲ್ಲಿ ನಡೆದಿರುವ ಘಟನೆಗಳಿಂದ ಗಡಾಫಿ ಅಥವಾ ಅವರ ಬೆಂಬಲಿಗರಿಗೆ ವಿನಾಯಿತಿ ಸಿಗದು ಎಂದು ವಿದೇಶಾಂಗ ಇಲಾಖೆ ವಕ್ತಾರ ಪಿ.ಜೆ.ಕ್ರೌಲಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಲಿಬಿಯಾ ಜನರ ಕಲ್ಯಾಣದ ಬಗ್ಗೆ ನಾವು ಗಮನಹರಿಸಿದ್ದೇವೆ. ಅಲ್ಲಿನ ಮಾನವೀಯ ಸ್ಥಿತಿಗತಿಯನ್ನು ಗಡಾಫಿ ಹೇಗೆ ನಿರ್ವಹಿಸುತ್ತಾರೆ ಎಂಬುದನ್ನು ನಾವು ನೋಡುತ್ತಿದ್ದೇವೆ. ಬಹಳಷ್ಟು ಪರ್ಯಾಯ ಅವಕಾಶಗಳು ನಮ್ಮ ಪರಿಶೀಲನೆಯಲ್ಲಿವೆ ಎಂದು ತಿಳಿಸಿದ್ದಾರೆ.

ಬಂಡುಕೋರರ ಭೇಟಿ: ಈ ಮಧ್ಯೆ, ಬಂಡುಕೋರರಿಗೆ ಸೇರಿದ ‘ರಾಷ್ಟ್ರೀಯ ಪರಿವರ್ತನಾ ಮಂಡಳಿ’ಯ ಸದಸ್ಯರನ್ನು ಅಮೆರಿಕದ ಅಧಿಕಾರಿಗಳು ಕೈರೊದಲ್ಲಿ ಭೇಟಿಯಾಗಿದ್ದಾರೆ. ಕೆಲವರ ಜೊತೆ ದೂರವಾಣಿ ಸಂಭಾಷಣೆಯನ್ನೂ ನಡೆಸಿದ್ದಾರೆ.ಆದರೆ ಈ ಬಗ್ಗೆ ಹೆಚ್ಚಿನ ವಿವರ ನೀಡಲು ನಿರಾಕರಿಸಿರುವ ಕ್ರೌಲಿ, ಲಿಬಿಯಾದಲ್ಲಿನ ಪರಿಸ್ಥಿತಿಯನ್ನು ಅರಿಯಲು ಈ ಭೇಟಿ ನಡೆದಿದೆ ಎಂದು ಹೇಳಿದ್ದಾರೆ.

ಬಂಡುಕೋರರಿಗೆ ಶಸ್ತ್ರಾಸ್ತ್ರ ಒದಗಿಸುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ, ಈ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡರೂ ಅದನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಜೊತೆ ಚರ್ಚಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಪ್ರಸ್ತುತ ಮಂಡಳಿಯು ಲಿಬಿಯಾದ ಮೇಲೆ ಶಸ್ತ್ರಾಸ್ತ್ರ ನಿರ್ಬಂಧ ಹೇರುವ ನಿರ್ಣಯ ಕೈಗೊಂಡಿದೆ. ಆದ್ದರಿಂದ ಇದಕ್ಕೆ ಸಂಬಂಧಿಸಿದ ಯಾವುದೇ ತೀರ್ಮಾನಕ್ಕೆ ಬಂದರೂ ಮಂಡಳಿಯ ‘ನಿರ್ಬಂಧ ಸಮಿತಿ’ಯ ಅನುಮತಿ ಕೋರಬೇಕಾಗುತ್ತದೆ. ನಿರ್ಣಯವನ್ನು ತೆಗೆದುಹಾಕುವ ಅಥವಾ ಅದಕ್ಕೆ ತಿದ್ದುಪಡಿ ತರುವ ಬಗ್ಗೆ ಚರ್ಚೆ ನಡೆದಿದೆ ಎಂದು ಕ್ರೌಲಿ ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.